🔥 Follow our WhatsApp Channel! ×
WhatsApp
Loading Now

ಅನಂತಪದ್ಮನಾಭ ದೇವಾಲಯದಲ್ಲಿ ಫೆ.25ರಂದು ಶತರುದ್ರಾಭಿಷೇಕ

ಅನಂತಪದ್ಮನಾಭ ದೇವಾಲಯ ಕುಡುಪು  – ಬ್ರಹ್ಮಕಲಶಾಭಿಷೇಕದ ದಿನಾಚರಣೆಯ ಅಂಗವಾಗಿ ಫೆಬ್ರವರಿ 25, 2026 ಬುಧವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿವೆ. 25.02.2018ರಂದು ನಡೆದ ಬ್ರಹ್ಮಕಲಶಾಭಿಷೇಕದ ಸ್ಮರಣಾರ್ಥವಾಗಿ ಈ ವಿಶೇಷ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ ವರ್ಷವೂ ಭಕ್ತರಿಗಾಗಿ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವೇಳಾಪಟ್ಟಿ

  • ಬೆಳಗ್ಗೆ 6.00 ಗಂಟೆಗೆ – ರುದ್ರಕಾಲಾಭಿಷೇಕ, ಪಂಚಾಮೃತ ಅಭಿಷೇಕ
  • ಬೆಳಗ್ಗೆ 8.00 ರಿಂದ 10.30ರವರೆಗೆ – ದೇವತಾ ಪ್ರಾರ್ಥನೆ, ಶತರುದ್ರಾಭಿಷೇಕ
  • ಬೆಳಗ್ಗೆ 11.00 ಗಂಟೆಗೆ – ಶ್ರೀ ದೇವರಿಗೆ ಸಹಸ್ರ ನಾಮಾರ್ಚನೆ, ಅಷ್ಟೋತ್ತರ ಅರ್ಚನೆ, ವಿಶೇಷ ನೈವೇದ್ಯ
  • ಮಧ್ಯಾಹ್ನ 12.00 ಗಂಟೆಗೆ – ಮಹಾಪೂಜೆ, ನೈವೇದ್ಯ
  • ಮಧ್ಯಾಹ್ನ 12.30 ಗಂಟೆಗೆ – ಮಹಾನೈವೇದ್ಯ ಸಂತರ್ಪಣೆ

ಸಂಜೆ ವಿಶೇಷ ಕಾರ್ಯಕ್ರಮ – “ವಣ ಪಲ್ಲಟ”

ವಿಶೇಷವಾಗಿ ಸಂಜೆ 6.30ರಿಂದ ಶ್ರೀ ದೇವರ ರಾಜಾಂಗಣದಲ್ಲಿ “ವಣ ಪಲ್ಲಟ” ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಭಕ್ತರ ವಿಶೇಷ ಆಕರ್ಷಣೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading