🔥 Follow our WhatsApp Channel! ×
WhatsApp
Loading Now

ಶ್ರೀ ಆದಿಶಕ್ತಿ ಭುವನೇಶ್ವರೀ ಆದಿನಾಥ ಸಿದ್ಧಪೀಠ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಯಾಗ ಸಂಪನ್ನ

ಶ್ರೀ ಆದಿಶಕ್ತಿ ಭುವನೇಶ್ವರೀ ಆದಿನಾಥ ಸಿದ್ಧಪೀಠ ಕ್ಷೇತ್ರದಲ್ಲಿ 14-01-2026ನೇ ಬುಧವಾರ ಬೆಳಿಗ್ಗೆ ಗಂಟೆ 9 ರಿಂದ ಶ್ರೀ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಶುಭದಿನದಂದು ವರ್ಷಂಪ್ರತಿ ನಡೆಯುವ ಸಾರ್ವಜನಿಕ ಮಹಾ ಮೃತ್ಯುಂಜಯ ಯಾಗವು ಧರ್ಮದರ್ಶಿ ಶ್ರೀ ಆದಿಶಕ್ತಿ ಭುವನೇಶ್ವರಿ ಅದಿನಾಥ ಸಿದ್ಧಪೀಠ ಶ್ರೀ ಪ್ರವೀಣ್‌ ರಾಜ್ ಮಚ್ಚೇಂದ್ರನಾಥ ಬಾಬಾ, ಅವರ ನೇತೃತ್ವದಲ್ಲಿ ನಡೆಯಿತು ಸಾವಿರಾರು ಭಕ್ತರು ಈ ಯಾಗದಲ್ಲಿ ಪಾಲ್ಗೊಂಡು ಶ್ರೀ ಮೃತ್ಯುಂಜಯನ ಹಾಗೂ ಶ್ರೀ ಭುವನೇಶ್ವರಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು ಮಧ್ಯಾಹ್ನ ಗಂಟೆ 12:30ಕ್ಕೆ ಪೂರ್ಣಾಹುತಿ ಸಂಪನ್ನಗೊಂಡು ಮಹಾಪೂಜೆ ನೆರವೇರಿತು ನಂತರ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ನಡೆಯಿತು.

ಆದಿಶಕ್ತಿ ಭುವನೇಶ್ವರಿ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಯಾಗವು ಮಕರ ಸಂಕ್ರಾಂತಿಯ ಶುಭ ದಿನದಂದು ಕನಕರವೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಕೋಟಿ ಚೆನ್ನಯ, ನೇಮದ ಸೂರಿ ಹಾಕುವ ಸಮಯದಲ್ಲಿ ಕೊಟ್ಟ ದೈವ ನುಡಿಯ ಹಾಗೂ ಬಬ್ಬು ಸ್ವಾಮಿ ನೇಮದ ಸಮಯದಲ್ಲಿ ಚಾವಡಿಯಲ್ಲಿ ಹಾಲು ಕುಡಿಯುವ ಸಮಯದಲ್ಲಿ ಕೊಟ್ಟ ದೈವ ನುಡಿ ಅನುಸಾರವಾಗಿ 30 ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading