ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಫೆ. 5ರಿಂದ 7ರವರೆಗೆ ವರ್ಷಾವಧಿ ಉತ್ಸವ
ಅಳಕೆ ಶ್ರೀ ನಾಗಬ್ರಹ್ಮ ದೇವಸ್ಥಾನ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಅಳಕೆ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ ಸಹಯೋಗದಲ್ಲಿ ಫೆಬ್ರವರಿ 5ರಿಂದ 7ರವರೆಗೆ ವರ್ಷದ ಜಾತ್ರೆ ನಡೆಯಲಿದೆ. ಫೆಬ್ರವರಿ 5ರಂದು ಗಣಪತಿ ಹೋಮ, ಕಲಶಪ್ರತಿಷ್ಠೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ರಾತ್ರಿ ಕೇಶವ ಶೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ. ಪಿ. ವಾಮನ ಶೆಣೈ ಅವರಿಗೆ ಅಭಿನಂದನಾ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ ಹಾಗೂ “ಆಂಟಿ ಬೊಕ್ಕ ಅಂಕಲ್” ತುಳು ನಾಟಕ ಪ್ರದರ್ಶನ ನಡೆಯಲಿದೆ.



ಫೆಬ್ರವರಿ 6ರಂದು ಸಂಜೆ ಭಜನೆ ನಡೆಯಲಿದ್ದು, ರಾತ್ರಿ 8ಕ್ಕೆ ಶ್ರೀ ನಾಗಬ್ರಹ್ಮ ದೇವರಿಗೆ ವಿಶೇಷ ಹೂವಿನ ಪೂಜೆ, 9ಕ್ಕೆ ಮಹಾಪೂಜೆ ಹಾಗೂ 10ಕ್ಕೆ “ಆನ್ ಮಗೆ” ತುಳು ನಾಟಕ ಪ್ರದರ್ಶನ ನಡೆಯಲಿದೆ. ಫೆಬ್ರವರಿ 7ರಂದು ಬೆಳಿಗ್ಗೆ 10ಕ್ಕೆ ನಾಗಬನದಲ್ಲಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಪಂಚಾಮೃತ ಅಭಿಷೇಕ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಸಂಜೆ 6ಕ್ಕೆ ಭಜನೆ ನಡೆಯಲಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply