ಅತ್ತಾವರ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆ. 13ರಿಂದ 17ರ ವರೆಗೆ ಮಹಾಶಿವರಾತ್ರಿ ಮಹೋತ್ಸವ
ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಉತ್ಸವವು ಫೆ. 13ರಿಂದ 17ರ ವರೆಗೆ ಜರಗಲಿದೆ.
ಈ ಸಂದರ್ಭ ದೇವತಾ ಪ್ರಾರ್ಥನೆ, ಗಣಹೋಮ, ಮಹಾಪೂಜೆ, ಅನ್ನ ಸಂತರ್ಪಣೆ, ರುದ್ರಾಭಿಷೇಕ, ಸೀಯಾಳ ಅಭಿಷೇಕ, ರಂಗ ಪೂಜೆ, ಸಂಪ್ರೋಕ್ಷಣೆ, ಭಜನೆ ನಡೆಯಲಿದೆ.





ಸಾಂಸ್ಕೃತಿಕ ಕಾರ್ಯಕ್ರಮಗಳಾದ ಗಾನ ವೈಭವ, ಬಪ್ಪನಾಡು ಕ್ಷೇತ್ರ ಮಹಾತ್ಮ ಯಕ್ಷಗಾನ, ರಂಗೋಲಿ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಜರಗಲಿದೆ. ಅಲ್ಲದೆ ಫೆ. 27ರಿಂದ 28ರ ವರೆಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ವರ್ಧಂತಿ ಉತ್ಸವವು ಜರಗಲಿದೆ. ಈ ಸಂದರ್ಭ ದೇವತಾ ಪ್ರಾರ್ಥನೆ, ಶತ ರುದ್ರಾಭಿಷೇಕ, ಮಹಾಪೂಜೆ, ಗಣಹೋಮ, ಅರ್ಚನೆ, ಕಲಶಾಭಿಷೇಕ, ಹೋಮಾದಿಗಳು, ವಿಶೇಷ ರಂಗಪೂಜೆ, ಬಲಿ ಉತ್ಸವ ನಡೆಯಲಿವೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.


Discover more from BHAKTHI SANJEEVINI
Subscribe to get the latest posts sent to your email.



Leave a Reply