🔥 Follow our WhatsApp Channel! ×
WhatsApp
Loading Now

ಫೆ. 6 ಹಾಗೂ 7 ರಂದು ಅತ್ತಾವರ ದೊಂಪದ ಬಲಿ ಉತ್ಸವ

ಫೆ. 6 ಹಾಗೂ 7 ರಂದು ಅತ್ತಾವರ ದೊಂಪದ ಬಲಿ ಉತ್ಸವ

ಮಂಗಳೂರು : ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ದೊಂಪದಬಲಿ ಉತ್ಸವವು ಫೆ. 6 ಹಾಗೂ 7 ರಂದು ನಡೆಯಲಿದೆ.

ಫೆ. 4 ರಂದು ಸಂಜೆ 5ಕ್ಕೆ ಕೋಳಿಕುಂಟ ಮುಹೂರ್ತ ಜರುಗಲಿದೆ. ಫೆ. 6 ರಂದು ಬೆಳಗ್ಗೆ 10ಕ್ಕೆ ಶ್ರೀ ದೈವಗಳ ಭಂಡಾರ ಆಗಮನವಾಗಲಿದ್ದು, ರಾತ್ರಿ 10 ರಿಂದ ಶ್ರೀ ವೈದ್ಯನಾಥ ದೈವದ ನೇಮೋತ್ಸವ ನಡೆಯಲಿದೆ. ಫೆ. 7 ರಂದು ರಾತ್ರಿ 8 ರಿಂದ ಶ್ರೀ ದೈವಗಳ ಭಕ್ತರಿಂದ ‘ಅನ್ನದಾನ ಸೇವೆ’ ನಡೆಯಲಿದೆ. ರಾತ್ರಿ 10 ರಿಂದ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ ನಡೆಯಲಿದ್ದು, ಬಳಿಕ ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ. ನಂತರ ಭಂಡಾರ ನಿರ್ಗಮನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading