🔥 Follow our WhatsApp Channel! ×
WhatsApp
Loading Now

ಅತ್ತಾವರ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಪ್ರಧಾನ ಗುಡಿಗೆ ಉತ್ತರ ಮುಹೂರ್ತ – ಏಪ್ರಿಲ್ 23ರಂದು ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ

ಮಂಗಳೂರು, ಫೆಬ್ರವರಿ 19: ಮಂಗಳೂರು ನಗರದ ಅತ್ತಾವರ ಪ್ರದೇಶದಲ್ಲಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅತ್ತಾವರ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ಜೀರ್ಣೋದ್ದಾರ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇದರ ಅಂಗವಾಗಿ ಪ್ರಧಾನ ಗುಡಿಗೆ ಮರದ ಛಾವಣಿ ಅಳವಡಿಸುವ ಕಾರ್ಯಕ್ಕೆ ಇಂದು ಉತ್ತರ ಮುಹೂರ್ತ ನೆರವೇರಿತು.

ಶ್ರೀ ಅಯ್ಯಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮರದ ಶಿಲ್ಪಿಗಳಾದ ಶ್ರೀ ಪುಷ್ಪರಾಜ್ ಅವರು ಉತ್ತರ ಪೂಜೆಯನ್ನು ನೆರವೇರಿಸಿ, ಪ್ರಧಾನ ಗುಡಿಯಲ್ಲಿ ಮರದ ಜಂತಿಯನ್ನು ಅಳವಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಏಪ್ರಿಲ್ 20, 2026ರಿಂದ ಸಕಲ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಏಪ್ರಿಲ್ 23, 2026ರ ಗುರುವಾರದಂದು ಸುಮೂಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ದುರ್ಗಾದೇವಿಯರ ಪ್ರತಿಷ್ಠಾ ಬ್ರಹ್ಮ ಕಲಶಾಭಿಷೇಕವು ಭಕ್ತಿಭಾವದಿಂದ ನೆರವೇರಲಿದೆ.

ಪ್ರತಿದಿನ ಅನ್ನಪ್ರಸಾದ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಭಕ್ತಜನರು ಸಕ್ರಿಯವಾಗಿ ಸಹಕರಿಸಬೇಕೆಂದು ಕ್ಷೇತ್ರ ಸಮಿತಿಯವರು ಮನವಿ ಮಾಡಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading