🔥 Follow our WhatsApp Channel! ×
WhatsApp
Loading Now

ಬಲ್ಯ ಬಾಳಿಕೆ ಬೋಳ್ನಾಡು ಗುತ್ತು: ಏಪ್ರಿಲ್ 5ರಿಂದ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಧರ್ಮ ಚಾವಡಿ ಗೃಹಪ್ರವೇಶ ಸಂಭ್ರಮ

ಮಂಗಳೂರು: ಉಳ್ಳಾಲ ತಾಲೂಕಿನ ಕೋಟೆಕಾರು ಗ್ರಾಮದ ಬಲ್ಯ ಬಾಳಿಕೆ ಬೋಳ್ನಾಡು ಗುತ್ತು ಕುಟುಂಬಸ್ಥರ ಆಶ್ರಯದಲ್ಲಿ ಶ್ರೀ ಅರಸು ಮಂಜಿಷ್ಣಾರ್ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮ ಚಾವಡಿಯ ಗೃಹಪ್ರವೇಶ ಮತ್ತು ಶ್ರೀ ದೈವಗಳಿಗೆ ನೇಮೋತ್ಸವವು ಏಪ್ರಿಲ್ 5ರಿಂದ 10ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಡ ಮತ್ತು ದೈವಜ್ಞ ಬಾಲಕೃಷ್ಣ ನಾಯರ್ ಚೌಕಿ ಅವರ ಮಾರ್ಗದರ್ಶನದಲ್ಲಿ ಈ ಪುಣ್ಯ ಕಾರ್ಯಗಳು ನೆರವೇರಲಿವೆ.

ಕಾರ್ಯಕ್ರಮದ ವಿವರಗಳು:

  • ಏಪ್ರಿಲ್ 5 (ಆದಿತ್ಯವಾರ): ಬೆಳಿಗ್ಗೆ 8.30ಕ್ಕೆ ನಾಗದೇವರಿಗೆ ತಂಬಿಲ ಸೇವೆ ನಡೆಯಲಿದೆ. ಸಂಜೆ 5.00ರಿಂದ ಸಾಮೂಹಿಕ ಪ್ರಾರ್ಥನೆ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೆಘ್ನ ಹೋಮ ಹಾಗೂ ವಾಸ್ತುಬಲಿ ನಡೆಯಲಿದೆ.
  • ಏಪ್ರಿಲ್ 6 (ಸೋಮವಾರ): ಬೆಳಿಗ್ಗೆ 7.00ಕ್ಕೆ ಗಣಪತಿ ಹೋಮ ನಡೆಯಲಿದ್ದು , ನಂತರ 9.33ರಿಂದ 10.43ರ ವೃಷಭ ಲಗ್ನದಲ್ಲಿ ಧರ್ಮ ಚಾವಡಿಯ ಗೃಹಪ್ರವೇಶ, ಮಾಡ ಸಾನ ಮತ್ತು ಕಟ್ಟೆಯಲ್ಲಿ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ನೆರವೇರಲಿದೆ.
  • ನೇಮೋತ್ಸವಗಳು: ಏಪ್ರಿಲ್ 6ರ ಸಂಜೆ 6.00 ಗಂಟೆಯಿಂದ ಅಣ್ಣ ದೈವದ ನೇಮ, ರಾತ್ರಿ 9.00ಕ್ಕೆ ತಮ್ಮ ದೈವದ ನೇಮ ಹಾಗೂ ರಾತ್ರಿ 1.00 ಗಂಟೆಗೆ ವೈದ್ಯನಾಥ ದೈವದ ನೇಮೋತ್ಸವ ಜರುಗಲಿದೆ.
  • ಏಪ್ರಿಲ್ 7 (ಮಂಗಳವಾರ): ಸಂಜೆ 4.00 ಗಂಟೆಗೆ ಮನೆಯಂಗಳದಲ್ಲಿ ಮಹಿಷಂದಾಯ ದೈವದ ನೇಮ ನಡೆಯಲಿದೆ. ರಾತ್ರಿ 7.00ಕ್ಕೆ ಕೊರತಿ ದೈವದ ಕೋಲ ಹಾಗೂ ರಾತ್ರಿ 10.00 ಗಂಟೆಗೆ ಗುಳಿಗ ದೈವದ ಕೋಲ ನಡೆಯಲಿದೆ.
  • ಏಪ್ರಿಲ್ 10 (ಶುಕ್ರವಾರ): ರಾತ್ರಿ 8.00 ಗಂಟೆಗೆ ಗುರುಹಿರಿಯರ ಆರಾಧನೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಭಕ್ತಾಧಿಗಳು ಮತ್ತು ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ಬಲ್ಯ ಬಾಳಿಕೆ ಬೋಳ್ನಾಡು ಗುತ್ತು ಕುಟುಂಬಸ್ಥರು ವಿನಂತಿಸಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Previous post

ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಪುನರ್ ಕಲಶಾಭಿಷೇಕ ಹಾಗೂ ನೇಮೋತ್ಸವ – ಮಾ. 30ರಿಂದ

Next post

ಫರಂಗಿಪೇಟೆ ಡೆಕ್ಕಿದು: ಮೇ 8ರಂದು ಶ್ರೀ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ವರ್ಷಾವಧಿ ಗಗ್ಗರ ಸೇವೆ

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading