ಮಾ.3ಕ್ಕೆ ಧರ್ಮಸ್ಥಳದಲ್ಲಿ ದರ್ಶನ ಸಮಯ ವ್ಯತ್ಯಯ
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ಶ್ರೀಕ್ಷೇತ್ರ ಧರ್ಮ ಸ್ಥಳದ ಶ್ರೀ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ದರ್ಶನದ ಸಮಯ ವ್ಯತ್ಯಯವಾಗಲಿದೆ. ಅಂದು ಮಧ್ಯಾಹ್ನ ಚಂದ್ರಗ್ರಹಣ ಇರುವುದರಿಂದ, ಮಧ್ಯಾಹ್ನ 1.30ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿರು ತ್ತದೆ. ಚಂದ್ರಗ್ರಹಣ ಮುಕ್ತಾಯದ ಬಳಿಕ ಶುದ್ದೀಕರಣ ಹಾಗೂ ಇತರ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ಆನಂತರ ರಾತ್ರಿ 7.30ರಿಂದ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ದೂರದ ಊರು ಗಳಿಂದ ಬರುವ ಭಕ್ತರು ದರ್ಶನದ ಸಮಯ ವ್ಯತ್ಯಯವನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9945725511 ಸಂಪರ್ಕಿಸಬಹುದೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply