🔥 Follow our WhatsApp Channel! ×
WhatsApp
Loading Now

ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಾ. 21ರಿಂದ ವಾರ್ಷಿಕ ಮಹೋತ್ಸವ

ಮಂಗಳೂರು: ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವವು ಮಾ. 21ರಿಂದ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಮಹೋತ್ಸವದ ಪೂರ್ವಭಾವಿಯಾಗಿ ಮಾ. 20ರಂದು ಮತ್ತ ಜಯಂತಿ ಅಂಗವಾಗಿ ಬೆಳಿಗ್ಗೆ 7.30ಕ್ಕೆ ಪಂಚಾಮೃತ ಅಭಿಷೇಕ ಹಾಗೂ ಪೂಜೆ ನಡೆಯಲಿದೆ. ಬಳಿಕ ಬೆಳಿಗ್ಗೆ 10ಕ್ಕೆ ಪ್ರಧಾನ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಬೆಳ್ಳಿ ಪಲ್ಲಕ್ಕಿ ಹಗಲು ಉತ್ಸವ ಜರುಗಲಿದೆ. ಸಂಜೆ 7.25ಕ್ಕೆ ದೀಪ ನಮಸ್ಕಾರ ಹಾಗೂ ಮಹಾಪೂಜೆ ನಡೆಯಲಿದ್ದು, ಬಳಿಕ ಬೆಳ್ಳಿ ಲಾಲಕಿ ಉತ್ಸವ ಮತ್ತು ರಾತ್ರಿ 10ಕ್ಕೆ ವಸಂತ ಪೂಜೆ ನಡೆಯಲಿದೆ.

ಮಾ. 21ರಂದು ಬೆಳಿಗ್ಗೆ 9.15ಕ್ಕೆ ಧ್ವಜಾರೋಹಣ ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಮಹಾಪೂಜೆ ಹಾಗೂ ಮಹಾಬಲಿ ಕಾರ್ಯಕ್ರಮ ಜರುಗಲಿದೆ. ರಾತ್ರಿ ದೀಪ ನಮಸ್ಕಾರ, ಮಹಾಪೂಜೆ, ಬೆಳ್ಳಿ ಪಲ್ಲಕ್ಕಿ ಉತ್ಸವ ಮತ್ತು ವಸಂತ ಪೂಜೆ ಜೊತೆಗೆ ಅಷ್ಟಾವಧಾನ ನಡೆಯಲಿದೆ. ಮಾ. 22ರಂದು ಶೇಷ ವಾಹನ ಭಂಡಿ ಉತ್ಸವ, ಮಾ. 23ರಂದು ಪುಷ್ಪರಥ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಮಾ. 24ರಂದು ಸಂಜೆ 6.30ಕ್ಕೆ 108 ಕಲಶ ಹಾಗೂ ಭದ್ರ ಚಕ್ರಾಬ್ಜ ಮಂಡಲ ಪೂಜೆ ಆರಂಭವಾಗಲಿದೆ. ಅದೇ ದಿನ ಮೃಗಭೇಟೆ ಉತ್ಸವ ಹಾಗೂ ಶೇಷ ವಾಹನ ಭಂಡಿ ಉತ್ಸವವೂ ನಡೆಯಲಿದೆ.

ಮಾ. 25ರಂದು ಬೆಳಿಗ್ಗೆ 8ಕ್ಕೆ ಪಂಚಾಮೃತ ಪುಳಕಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ, 108 ಕಲಶಾಭಿಷೇಕ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ ನಡೆಯಲಿದೆ. ಬಳಿಕ ಬೆಳಿಗ್ಗೆ 11.30ಕ್ಕೆ ಯಜ್ಞಾರಂಭ ಮತ್ತು ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಬ್ರಹ್ಮ ರಥಾರೋಹಣ ಜರುಗಲಿದೆ. ಸಂಜೆ 5ಕ್ಕೆ ಅನ್ನಸಂತರ್ಪಣೆ, ರಾತ್ರಿ ವಸಂತ ಪೂಜೆ, ಅಷ್ಟಾವಧಾನ ಹಾಗೂ ಶಯನೋತ್ಸವ ನಡೆಯಲಿದೆ.

ಮಾ. 26ರಂದು ಬೆಳಿಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಪ್ರಾತಃ ಪೂಜೆ, 11ಕ್ಕೆ ಯಜ್ಞ ವಿಸರ್ಜನೆ ಹಾಗೂ ಅವಭ್ರಥೋತ್ಸವ ನಡೆಯಲಿದ್ದು, ಬಳಿಕ ಕದ್ರಿ ಕ್ಷೇತ್ರಕ್ಕೆ ನಿರ್ಗಮನ ಮತ್ತು ಸಂಜೆ ಮರಳಿ ಆಗಮನ ನಡೆಯಲಿದೆ. ರಾತ್ರಿ ಸಾಮೂಹಿಕ ಪ್ರಾರ್ಥನೆ, ಬಟ್ಟಲು ಕಾಣಿಕೆ ಹಾಗೂ ಧ್ವಜ ಅವರೋಹಣದೊಂದಿಗೆ ಮಹೋತ್ಸವ ಸಮಾಪ್ತಿಯಾಗಲಿದೆ.

ಇದೇ ಸಂದರ್ಭದಲ್ಲಿ ಮಾ. 27ರಂದು ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪಂಚಾಮೃತ ಅಭಿಷೇಕ, ಮಹಾಪೂಜೆ, ಬೆಳ್ಳಿ ಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ, ದೀಪ ನಮಸ್ಕಾರ ಹಾಗೂ ವಸಂತ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading