ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿಃ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ 38ನೇ ವರ್ಷದ ವರ್ಧಂತಿ ಉತ್ಸವ
ಜ. 28 ರಂದು 38ನೇ ವರ್ಷದ ವರ್ಧಂತಿ ಉತ್ಸವ
ಮಂಗಳೂರು : ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿಃ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ 38ನೇ ವರ್ಷದ ವರ್ಧಂತಿ ಉತ್ಸವವು ಜ. 28 ರಂದು ನಡೆಯಲಿದೆ.
ಜ. 27 ರಂದು ಶ್ರೀ ಗಣೇಶ ಪೂಜಾ, ಪುಣ್ಯಾಹ, ಪೂರ್ವಕ ಪ್ರಧಾನ ದೇವತಾ ಪರಿವಾರ ದೇವತಾ ಕಲಶ ಸ್ಥಾಪನೆ ಪೂಜಾ, ಅಗ್ನಿ ಜನನ ಗಣಹೋಮ, ನವಗ್ರಹ ಹೋಮ ಹಾಗೂ ಸಾಯಂಕಾಲ ಗಾಯತ್ರಿ ಜಪಪಾರಾಯಣ ನಡೆಯಲಿದೆ. ಜ. 28 ರಂದು ಬೆಳಗ್ಗೆ ಬಾಲಚಂದ್ರ ಪೂಜಾ ಗಾಯತ್ರಿ ಹೋಮ, ಪರಿವಾರ ಹೋಮ ನಡೆಯಲಿದೆ. ಮಧ್ಯಾಹ್ನ ಬಲಿದಾನ ಪೂರ್ಣಾಹುತಿ ಕುಂಭಾಭಿಷೇಕ, ಮಹಾ ಮಂಗಳಾರತಿ ಬ್ರಹ್ಮಚಾರಿ ಸುವಾಸಿನಿ. ಬ್ರಾಹ್ಮಣ ಪೂಜಾ ತೀರ್ಥಪ್ರಸಾದ ವಿತರಣೆಯಾಗಲಿದೆ. 1ಕ್ಕೆ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 7ಕ್ಕೆ ರಜತ ಪಲ್ಲಕ್ಕಿಯಲ್ಲಿ ನಗರ ಪ್ರದಕ್ಷಿಣೆಯು ದೇವಸ್ಥಾನದಿಂದ ಹೊರಟು ಕೆಳರಥಬೀದಿ, ಚಾಮರಗಲ್ಲಿ, ಬಸವನಗುಡಿ, ನ್ಯೂ ಚಿತ್ರಾ ಟಾಕೀಸು ಆಗಿ ದೇವಸ್ಥಾನಕ್ಕೆ ಆಗಮಿಸಲಿದೆ. ಬಳಿಕ ಅಷ್ಟಾವ ದಾನ ಸೇವೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ದೈವಜ್ಞ ಮಹಿಳಾ ಮಂಡಳಿ ಮಂಗಳೂರು ಇರವರಿಂದ ಮಧ್ಯಾಹ್ನ ಶ್ರೀ ದೇವಿಗೆ ಕ್ಷೀರಾಭಿಷೇಕ ನಡೆಯಲಿದೆ. ದೇವಸ್ಥಾನದ ವತಿಯಿಂದ ಶ್ರೀ ಸಿದ್ಧಿವಿನಾಯಕ ದೇವರಿಗೆ 108 ಸೀಯಾಳದ ಅಭಿಷೇಕ ನಡೆಯಲಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply