ಫೆ.26ರಿಂದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ
ಇರಾ: ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆಬ್ರವರಿ 26ರಿಂದ ಮಾರ್ಚ್ 5ರವರೆಗೆ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ಫೆಬ್ರವರಿ 26ರಂದು ಶತರುದ್ರಾಭಿಷೇಕದೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದ್ದು, ಸಂಜೆ ಕಿರುವಾಲು ಬಾವಬೀಡಿನಿಂದ ಬಾರಿಮಲೆಗೆ ತೆರಳಿ ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ ದೊಡ್ಡ ರಂಗಪೂಜೆ ನಡೆಯಲಿದೆ. ಫೆಬ್ರವರಿ 27ರಂದು ಸಾಮೂಹಿಕ ಕುಂಕುಮಾರ್ಚನೆ, ಧ್ವಜಾರೋಹಣ, ಪರ್ವಸೇವೆ ಹಾಗೂ ಮೂಡು ಸವಾರಿ ಜರುಗಲಿದೆ. ಫೆಬ್ರವರಿ 28ರಂದು ಸಾಮೂಹಿಕ ಅಪ್ಪದ ಪೂಜೆ, ರಂಗಪೂಜೆ ಹಾಗೂ ಬಯನ ಬಲಿ, ತೆಂಕು ಮತ್ತು ಪಡು ಸವಾರಿ ನಡೆಯಲಿದೆ.


ಮಾರ್ಚ್ 1ರಂದು ಬಯನ ಬಲಿ, ಬಡಗು ಸವಾರಿ ಹಾಗೂ ವಿಶೇಷ ಹೂವಿನ ಪೂಜೆ ನಡೆಯಲಿದ್ದು, ಮಾರ್ಚ್ 2ರಂದು ಕವಾಟ ಉದ್ಘಾಟನೆ, ಚೂರ್ಣೋತ್ಸವ, ಬಲಿ ಉತ್ಸವ ಮತ್ತು ಧ್ವಜಾವರೋಹಣ ಜರುಗಲಿದೆ. ಮಾರ್ಚ್ 3ರಂದು ಚಂದ್ರಗ್ರಹಣದ ಪ್ರಯುಕ್ತ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಮಾರ್ಚ್ 4 ಮತ್ತು 5ರಂದು ದೈವಗಳ ನೇಮ ಕಾರ್ಯಕ್ರಮಗಳು ನಡೆಯಲಿದ್ದು, ಅಂತಿಮ ದಿನ ಕಿರುವಾಲು ಬಾವಬೀಡಿಗೆ ಹೊರಡಲಿದೆ.
ಜಾತ್ರಾ ಅವಧಿಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply