ಜೆಪ್ಪು ಮಹಾಕಾಳಿಪಡ್ಡಿನಲ್ಲಿ 21ನೇ ವರ್ಷದ ಶ್ರೀ ಮಹಾಕಾಳಿ ನೇಮೋತ್ಸವ – ಫೆ.14ರಂದು ಮಹೋತ್ಸವ
ಮಂಗಳೂರು: ಮಹಾಕಾಳಿಪಡ್ಡು, ಜೆಪ್ಪುವಿನಲ್ಲಿರುವ ಶ್ರೀ ಮಹಾಕಾಳಿ ಕ್ಷೇತ್ರದಲ್ಲಿ 21ನೇ ವರ್ಷದ ಶ್ರೀ ಮಹಾಕಾಳಿ ನೇಮೋತ್ಸವ ಹಾಗೂ ಉಳ್ಳಾಯ ಮುಗೇರ ಕಾಳ ಮತ್ತು ಗುಳಿಗ ದೈವಗಳ ನೇಮೋತ್ಸವವು ತಾ. 14-02-2026ನೇ ಶನಿವಾರ ಜರಗಲಿದೆ.
ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸದ ಬಹುಳ 12ರಂದು ನಡೆಯಲಿರುವ ಈ ಮಹೋತ್ಸವವು ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿ ಅವರ ಪೂರ್ಣ ಅನುಗ್ರಹದೊಂದಿಗೆ, ಶ್ರೀ ಶ್ರೀ ನಿತಿನ್ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮನವರ (ಶ್ರೀ ಗುರುಪರಾಶಕ್ತಿ ಮಠ, ಮರಕಡ) ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ 5.00ಕ್ಕೆ ಭಂಡಾರ ಏರಿಸುವ ಕಾರ್ಯಕ್ರಮ ನಡೆಯಲಿದೆ.
ಕ್ಷೇತ್ರದ ಅಧ್ಯಕ್ಷರು, ಭಕ್ತರು ಹಾಗೂ ಊರ ಹತ್ತು ಸಮಸ್ತರು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply