ಕದ್ರಿ ಜಾತ್ರೆ: ಜೋಗಿ ಮಠದ ಸ್ವಾಮೀಜಿ ಅವರಿಂದ ಜಗನ್ಮಾತೆ ಶ್ರೀಮಂಗಳಾದೇವಿಗೆ ಆಹ್ವಾನ
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರೆ ಪ್ರಯುಕ್ತ ಮಂಗಳವಾರ ಕದ್ರಿ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ವತಿಯಿಂದ ಜೋಗಿ ಮಠದ ಪರ್ಯಾಯ ಪಟ್ಟದಲ್ಲಿರುವ ಶ್ರೀ ಅರಸು ನಿರ್ಮಲಾನಾಥ ಜೀ ಅವರು ಅನುಯಾಯಿಗಳೊಂದಿಗೆ ಮಹತೋಭಾರ ಶ್ರೀ ಮಂಗಳಾದೇವಿ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಪಟ್ಟೆ-ಪೀತಾಂಬರ ವಸ್ತ್ರದೊಂದಿಗೆ ತಾಂಬೂಲ ಕಾಣಿಕೆ ಸಹಿತ ಕದ್ರಿ ಜಾತ್ರೆಗೆ ಆಹ್ವಾನವನ್ನಿತ್ತು ಶ್ರೀ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.


ಕದ್ರಿಯ ವರ್ಷಾವಧಿ ಜಾತ್ರೆಯ ಪ್ರಾರಂಭದ ಮುನ್ನಾದಿನ ಯೋಗೇಶ್ವರ (ಜೋಗಿ) ಮಠದ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ಫಲ ಪುಷ್ಪ ಸೀರೆ ಪೀತಾಂಬರ, ಕಾಣಿಕೆ ಮೊದಲಾದ ವಸ್ತುಗಳನ್ನು ಸಮರ್ಪಿಸಿ ಜಾತ್ರೆಯ ಉತ್ಸವಾದಿಗಳು, ರಥ ಸವಾರಿಯು ಸಾಂಗದಿಂದ ನಿರ್ವಿಘ್ನವಾಗಿ ನಡೆಯಬೇಕೆಂದು ಹಾಗೂ ಮಂಗಳಾದೇವಿಯೂ ಬಂದು ಪಾಲ್ಗೊಳ್ಳಬೇಕೆಂದು ಸನ್ನಿಧಾನದಲ್ಲಿ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿ, ಉತ್ಸವಕ್ಕೆ ಆಮಂತ್ರಣವನ್ನು ನೀಡುವ ಪದ್ಧತಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದರಂತೆ ಜೋಗಿ ಮಠದ ಸ್ವಾಮೀಜಿ ಆಗಮಿಸಿ ಆಹ್ವಾನ ನೀಡಿದ್ದು, ಈ ವೇಳೆ ದೇಗುಲದ ಪ್ರಮುಖರು ಉಪಸ್ಥಿತರಿದ್ದರು
ಬೆಳಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಸಂಕಲ್ಪ, ಪುಣ್ಯಾಹ, ಕಲಶಪೂಜೆ, ಗಣಹೋಮ. 9ರಿಂದ ಲಕ್ಷ್ಮೀನಾರಾಯಣ ಹೃದಯ ಹೋಮ ಆರಂಭ, 11.30ಕ್ಕೆ ಪೂರ್ಣಾಹುತಿ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.

Discover more from BHAKTHI SANJEEVINI
Subscribe to get the latest posts sent to your email.



Leave a Reply