🔥 Follow our WhatsApp Channel! ×
WhatsApp
Loading Now

ಕಂಕನಾಡಿ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ

ಕಂಕನಾಡಿ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂಭ್ರಮದಿಂದ ಜರಗುತ್ತಿದ್ದು, ಸೋಮವಾರವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ವಿವಿಧ ಗಣ್ಯರು, ಭಕ್ತರು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಗಣಪತಿ ಹೋಮ, ಮಹಾ ಪೂಜೆ, ರಾತ್ರಿ 8 ಗಂಟೆಗೆ ಬೈದರ್ಕಳರು ಒಲಿಮರೆಯಿಂದ ಹೊರಡಲಿಕ್ಕೆ 10 ಗಂಟೆಗೆ ಶ್ರೀ ಬಾಲಪರಮೇಶ್ವರಿ ದೇವಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿ ಬಲಿ, 11 ಗಂಟೆಗೆ ಶ್ರೀ ದೇಯಿಬೈದೆತಿ ನೇಮ ಮತ್ತು ಕೋಟಿ ಚೆನ್ನಯರ ಹಾಗೂ ದೇಯಿ ಬೈದೆತಿ ಭೇಟಿ. 12 ಗಂಟೆಗೆ ಗಣಪತಿ ದೇವರ ಮತ್ತು ಬ್ರಹ್ಮರ ಜೋಡು ಮಹಾಬಲಿ ಆಗಿ ಪರಂಜ್ಯೋತಿ ಕಟ್ಟೆಯಲ್ಲಿ ಗಣಪತಿ ದೇವರಿಗೆ ಮತ್ತು ಬ್ರಹ್ಮರಿಗೆ ಮಂಟಪ ಪೂಜೆ, 2 ಗಂಟೆಗೆ ಶ್ರೀ ಬ್ರಹ್ಮರಿಗೆ ಚಂದ್ರಮಂಡಲ ರಥೋತ್ಸವ. 2.30ಕ್ಕೆ

ಸುರಿಯ ಕೊಡಲಿಕ್ಕೆ 2.30ಕ್ಕೆ ಗಣಪತಿ ದೇವರ ಮತ್ತು ಬ್ರಹ್ಮರ ಪಾಲಕಿ ಬಲಿ, 4ಕ್ಕೆ ಬೈದರ್ಕಳ ದರುಶನ ಆಗಿ ಸುರಿಯ ಹಾಕಲಿಕ್ಕೆ ಮತ್ತು ಅವಧೂತ ಕಟ್ಟೆಯಲ್ಲಿ ಮಹಾತ್ಮರಿಗೆಕೊಡಮಣಿತ್ತಾಯ ನೇಮ ನಡೆದು. ಶ್ರೀ ಕ್ಷೇತ್ರದಲ್ಲಿ ಜ.6ರಂದು ಸಂಜೆ 5 ಗಣಪತಿ ಹೋಮ, 7.30ರಿಂದ 9 ಗಂಟೆಯವರೆಗೆ ಮಾಯಂದಾಲ್ ದೇವಿಯ ಉತ್ಸವ, 10.30ಕ್ಕೆ ಸ್ಥಳ ಶುದ್ದಿ ಕಲಶ, ಹೋಮ, 11 ಗಂಟೆಗೆ ಮಹಾತ್ಮರಿಗೆ ಮಹಾಪೂಜೆ, ನೈವೇದ್ಯ ಸಮರ್ಪಣೆ. ರಾತ್ರಿ 11.30ಕ್ಕೆ ಬೈದರ್ಕಳ ದರುಶನ ಆಗಿ ಧ್ವಜಾವರೋಹಣ ನಡೆಯಿತು. ಪೂಜೆ ಅನಂತರ ಬೈದರ್ಕಳ ಜಾತ್ರೆ ಜರಗಿತು.ರಾತ್ರಿಯಿಡೀ ನಡೆದ ಉತ್ಸವದಲ್ಲಿ ಸಾವಿ ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ದೇವರ ಪ್ರಸಾದ ಸ್ವೀಕರಿಸಿದರು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading