ಶ್ರೀ ಕ್ಷೇತ್ರ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಸೃಷ್ಟಿ ಮಹೋತ್ಸವದ ಸಂಭ್ರಮ



ಕುಡುಪು ಶ್ರೀಅನಂತಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದ ಷಷ್ಠಿ ಬ್ರಹ್ಮರಥೋತ್ಸವ ಜರುಗಿತು. ಮುಂಜಾನೆ ಅನ್ನ ಛತ್ರದಲ್ಲಿ ಕೊಪ್ಪರಿಗೆ ಮಹೂರ್ತ ಪ್ರಾರ್ಥನೆ ನಡೆದು, ಬಳಿಕ ಶ್ರೀ ಅನಂತಪದ್ಮನಾಭದೇವರಿಗೆ ಉಷಾ ಕಾಲದ ಪೂಜೆ, ವಿಶೇಷ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ನವಕ ಪ್ರಧಾನ ಹೋಮ ಹಾಗೂ ಬ್ರಹ್ಮರಥದ ರಥ ಕಲಶ, ಶ್ರೀ ಅನಂತಪದ್ಮನಾಭ ದೇವರಿಗೆ ವಿಶೇಷವಾದ ಅರ್ಚನೆ, ಸಹಸ್ರ ನಾಮ ಅರ್ಚನೆ, ಅಷ್ಟೋತ್ತರ ಅರ್ಚನೆ ಸೇವೆಗಳು, ಹಾಲು ಪಾಯಸ ಸೇವೆಗಳು ನಡೆದ ಬಳಿಕ ಶ್ರೀಅನಂತ ಪದ್ಮನಾಭದೇವರಿಗೆ ಹರಿವಾಣ ನೈವೇದ್ಯ ಸಮರ್ಪಣೆಗೊಂಡಿತು. ಮಧ್ಯಾಹ್ನ ದ ಮಹಾಪೂಜೆ, ಬಳಿಕ ಪಲ್ಲಪೂಜೆ ನಡೆಸಲಾಯಿತು. ದೇವರ ಬಲಿ ಹೊರಟು ರಾಜಾಂಗಣದಲ್ಲಿ ಸರ್ವ ವಾದ್ಯ ಸುತ್ತು ಸೇವೆಗಳು ನಡೆದ ಬಳಿಕ ರಾಜಬೀದಿಗೆ ತೆರಳಿ ಬ್ರಹ್ಮ ರಥಾರೋಹಣ ನಡೆಯಿತು.
Discover more from BHAKTHI SANJEEVINI
Subscribe to get the latest posts sent to your email.



Leave a Reply