ಮಂಗಳೂರು ಮಂಗಳಾದೇವಿ ಜಾತ್ರಾ ಮಹೋತ್ಸವದಲ್ಲಿ ನೃತ್ಯ ವೈಭವ – ಮೆಚ್ಚುಗೆ ಪಡೆದ ಮಕ್ಕಿಮನೆ ಕಲಾವೃಂದ
ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಇತ್ತೀಚೆಗೆ (ಮಾ. 9, 2026) ನೃತ್ಯ ವೈಭವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.
ಮಲ್ಲಿಕಾ ಕಲಾವೃಂದ ಮಂಗಳೂರು ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಕಲಾವಿದರು ಮನಮೋಹಕ ನೃತ್ಯ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನಗೆದ್ದರು. ವೈವಿಧ್ಯಮಯ ನೃತ್ಯ ರೂಪಕಗಳು ಮತ್ತು ಕಲಾತ್ಮಕ ಅಭಿವ್ಯಕ್ತಿಗಳು ಪ್ರೇಕ್ಷಕರಿಂದ ಭಾರೀ ಪ್ರಶಂಸೆಗೆ ಪಾತ್ರವಾದವು.

ಕಾರ್ಯಕ್ರಮದ ವೇಳೆ ಕರ್ನಾಟಕ ಪತ್ರಕರ್ತರ ಸಂಘ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದೇಶ್ ಕುಮಾರ್ ಮಂಗಳೂರು ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಮಕ್ಕಿಮನೆ ಕಲಾವೃಂದಕ್ಕೆ ಅವರು ನೀಡಿದ ನಿರಂತರ ಸಹಕಾರ ಮತ್ತು ಇತ್ತೀಚೆಗೆ “ಕನ್ನಡ ಉಳಿಸಿ ಬೆಳೆಸಿ” ಅಭಿಯಾನದ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಿಕಾ ಕಲಾವೃಂದದ ಕಾರ್ಯಧ್ಯಕ್ಷ ಸುಧಾಕರ ರಾವ್ ಪೇಜಾವರ, ಭಾರತೀಯ ಜೈನ್ ಮಿಲನ್ ಮಂಗಳೂರು ಅಧ್ಯಕ್ಷ ರತ್ನಾಕರ ಜೈನ್, ಶ್ರೀ ರತ್ನ ಪ್ರತಿಷ್ಠಾನ ಅಧ್ಯಕ್ಷ ಮಾಧವ ಶಿವಮೊಗ್ಗ, ವಿನಯಾನಂದ, ಪ್ರಿಯದರ್ಶಿನಿ ಜೈನ್, ರಿಮಾ ಜಗನ್ನಾಥ್, ಅಶಿಶ್ ಅಂಚನ್, ಲಾವಣ್ಯ ರವಿ ಶಾಂತಿ, ನೇಹಾ ಅಮಿನ್, ಸುದೇಶ್ ಜೈನ್ ಮಕ್ಕಿಮನೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೇಯಾ ದಾಸ್ ಸುಂದರವಾಗಿ ನಿರೂಪಿಸಿದರು. ಶ್ರೀಲತಾ ಜೈನ್, ಚಂದ್ರಾವತಿ, ಮನಸ್ಸಿ, ತನುಸ್ವಿ, ಗೌರವ್ ಜೈನ್ ಹಾಗೂ ಇತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸಾಂಸ್ಕೃತಿಕ ವೈಭವ ಮತ್ತು ಕಲಾತ್ಮಕ ನೃತ್ಯ ಪ್ರದರ್ಶನಗಳಿಂದ ಕಂಗೊಳಿಸಿದ ಈ ಕಾರ್ಯಕ್ರಮವು ಪ್ರೇಕ್ಷಕರ ಮನದಲ್ಲಿ ಮರೆಯಲಾಗದ ಅನುಭವವನ್ನು ಮೂಡಿಸಿತು.
Discover more from BHAKTHI SANJEEVINI
Subscribe to get the latest posts sent to your email.



Leave a Reply