🔥 Follow our WhatsApp Channel! ×
WhatsApp
Loading Now

ಮಂಗಳಾದೇವಿ ದೇವಸ್ಥಾನದಲ್ಲಿ ತಾಯಿ ಜಗನ್ಮಾತೆಯ ವರ್ಷಾವಧಿ ಜಾತ್ರಾ ಮಹೋತ್ಸವ ಮಾ.8ರಿಂದ

ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ತಾಯಿ ಜಗನ್ಮಾತೆಯ ವರ್ಷಾವಧಿ ಜಾತ್ರಾ ಮಹೋತ್ಸವವು ಮಾರ್ಚ್ 8ರಿಂದ 13ರವರೆಗೆ ಭಕ್ತಿಭಾವದಿಂದ ನಡೆಯಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾರ್ಚ್ 9ರಂದು 108 ತೆಂಗಿನಕಾಯಿ ಗಣ ಹೋಮ ನಡೆಯಲಿದೆ. ಮಾರ್ಚ್ 10 ಮತ್ತು 13ರಂದು ಸೀರೆಗಳ ಏಲಂ ನಡೆಯಲಿದೆ. ಮಾರ್ಚ್ 12ರಂದು ಮಧ್ಯಾಹ್ನ 12 ಗಂಟೆಗೆ ರಥಾರೋಹಣ ಹಾಗೂ ಸಂಜೆ 7 ಗಂಟೆಗೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀಭೂತ ಬಲಿ, ಕವಾಟ ಬಂಧನ ಮತ್ತು ಶಯನ ಕಾರ್ಯಕ್ರಮಗಳು ಜರುಗಲಿವೆ. ಇದೇ ದಿನ ಶ್ರೀ ದೇವಿಯ ಶಯನಕ್ಕಾಗಿ ಹೂಗಳನ್ನು ತಂದು ಅರ್ಪಿಸುವ ಕಾರ್ಯಕ್ರಮವೂ ನಡೆಯಲಿದೆ.

ಮಾರ್ಚ್ 13ರಂದು ಬೆಳಗ್ಗೆ 6.30ಕ್ಕೆ ಕವಾಟೋದ್ಘಾಟನೆ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಹರಕೆಯ ತುಲಾಭಾರ ಸೇವೆ ನಡೆಯಲಿದೆ. ಸಂಜೆ 7 ಗಂಟೆಗೆ ಬಲಿ ಹೊರಟು ಅವಕೃತ ಸ್ನಾನ ಹಾಗೂ ಧ್ವಜಾರೋಹಣ ನಡೆಯಲಿದೆ. ಮಾರ್ಚ್ 14ರಂದು ಸಂಪ್ರೋಕ್ಷಣೆ ನಡೆಯಲಿದ್ದು, ರಾತ್ರಿ 8.30ಕ್ಕೆ ಪರಿವಾರ ದೈವಗಳಿಗೆ ನೇಮೋತ್ಸವ ಜರುಗಲಿದೆ.

ಜಾತ್ರೋತ್ಸವದ ಅವಧಿಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಎಂ. ಅರುಣ್ ಐತಾಳ್ ತಿಳಿಸಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading