🔥 Follow our WhatsApp Channel! ×
WhatsApp
Loading Now

ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ 2026ಕ್ಕೆ ಚಾಲನೆ

ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ 2026ಕ್ಕೆ ಶನಿವಾರ ಸಂಜೆ ಚಾಲನೆ ದೊರಕಿತು.

ಸೂರ್ಯಾಸ್ತದ ಗೋಧೂಳಿ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಹಾಗೂ ಮಹಾತಾಯಿ ಮಂಗಳಾದೇವಿಯ ಸನ್ನಿಧಾನದಲ್ಲಿ ದೇವತಾ ಪ್ರಾರ್ಥನೆ ನೆರವೇರಿಸಲಾಯಿತು. ಈ ಮೂಲಕ ಶ್ರೀ ಮಂಗಳಾದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.

ಶ್ರೀ ಕ್ಷೇತ್ರದ ತಂತ್ರಿವರೇಣ್ಯರು, ಪುರೋಹಿತರು, ಪ್ರಧಾನ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.

ನಾಳೆ ಅಪರಾಹ್ನ 12 ಗಂಟೆಗೆ ಜಗನ್ಮಾತೆಯ ಮಹಾಪೂಜೆ ನಡೆಯಲಿದ್ದು, ನಂತರ ಧ್ವಜಾರೋಹಣದೊಂದಿಗೆ ಶ್ರೀ ಮಂಗಳಾದೇವಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಅಧಿಕೃತವಾಗಿ ಶುಭಾರಂಭಗೊಳ್ಳಲಿದೆ.

ಜಾತ್ರಾ ಪರ್ವದ ಈ ಶುಭ ಸಂದರ್ಭದಲ್ಲಿ ಜಗನ್ಮಾತೆ ಮಂಗಳಾದೇವಿಯು ಭಕ್ತರಿಗೆ ಸುಖ, ಶಾಂತಿ, ಸೌಭಾಗ್ಯ, ಸಂಪತ್ತು ಹಾಗೂ ಆಯುಷ್ಯಾರೋಗ್ಯವನ್ನು ಕರುಣಿಸಲಿ ಎಂದು ದೇವಸ್ಥಾನದಿಂದ ಶುಭಾಶಯ ತಿಳಿಸಲಾಗಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading