ಮಿತ್ತ ಮುಗೇರ್‌ನಲ್ಲಿ ಶ್ರೀ ಸ್ವಾಮಿ ಅಣ್ಣಪ್ಪ ಪಂಜುರ್ಲಿ ಸೇರಿದಂತೆ ದೈವಗಳಿಗೆ ಗಗ್ಗರ ಸೇವೆ – ಮಾ. 28, 29ರಂದು
ಮಿತ್ತ ಮುಗೇರ್ ಪ್ರದೇಶದಲ್ಲಿ ಶ್ರೀ ಸ್ವಾಮಿ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ–ಕಲ್ಕುಡ, ಗುಳಿಗ ಹಾಗೂ ಕೊರಗಜ್ಜ ದೈವಗಳಿಗೆ ವಿಶೇಷ ಗಗ್ಗರ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮಾ. 28 ಮತ್ತು 29, 2026ರಂದು ಭಕ್ತಿಭಾವದಿಂದ ನಡೆಯಲಿವೆ.

ಮಾ. 28ರಂದು ಶನಿವಾರ ಶ್ರೀಮತಿ ವಿಜಯ ಕೀರ್ತಿ ಮತ್ತು ಮಕ್ಕಳ ಹರಕೆಯಾಗಿ ಗಗ್ಗರ ಸೇವೆ ನೆರವೇರಲಿದ್ದು, ಶ್ರೀ ಅಣ್ಣಪ್ಪ ಪಂಜುರ್ಲಿ ಸ್ವಾಮಿಗೆ ಎಣ್ಣೆಬೂಲ್ಯ, ಅನ್ನ ಸಂತರ್ಪಣೆ, ಕಲ್ಲುರ್ಟಿ–ಕಲ್ಕುಡ ಕೋಲೋತ್ಸವ, ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ಹಾಗೂ ಗುಳಿಗ ಕೋಲೋತ್ಸವ ನಡೆಯಲಿವೆ.
ಮಾ. 29ರಂದು ಭಾನುವಾರ ಕೊರಗಜ್ಜ ದೈವದ ಕೋಲ ಸೇವೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಅನೇಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಈ ದೈವಿಕ ಕಾರ್ಯಕ್ರಮಗಳಿಗೆ ಭಕ್ತರು ಬಂಧು-ಮಿತ್ರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವದ ಸಿರಿಮುಡಿ, ಗಂಧ-ಪ್ರಸಾದವನ್ನು ಸ್ವೀಕರಿಸಿ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮತಿ ಭವಾನಿ ಚಂದ್ರಶೇಖರ ಮತ್ತು ಕುಟುಂಬಸ್ಥರು ಮನವಿ ಮಾಡಿದ್ದಾರೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply