ನಂದನಹಿತ್ಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಪುನರ್ ಕಲಶಾಭಿಷೇಕ ಹಾಗೂ ನೇಮೋತ್ಸವ – ಮಾ. 30ರಿಂದ
ಬಂಟ್ವಾಳ: ನಗರದ ನಂದನಹಿತ್ಲುವಿನ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಪುನರ್ ಕಲಶಾಭಿಷೇಕ ಹಾಗೂ ಕಾಲಾವಧಿ ನೇಮೋತ್ಸವವು ಮಾ. 30ರಿಂದ ಎ. 3ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 30ರಂದು ಸಂಜೆ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ ಹಾಗೂ ದಿಕ್ಪಾಲಕ ಬಲಿ ನಡೆಯಲಿದೆ.
ಮಾ. 31ರಂದು ಬೆಳಿಗ್ಗೆ 6ಕ್ಕೆ ಗಣಹೋಮ, ಶ್ರೀ ನಾಗದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ನಾಗತಂಬಿಲ (ಸರ್ಪತ್ರಯ ಹೋಮ) ನಡೆಯಲಿದ್ದು, ಸಂಜೆ 6ಕ್ಕೆ ಕ್ಷೇತ್ರದ ಧರ್ಮ ದೈವಗಳಿಗೆ ಕಲಶಾಧಿವಾಸ ಹಾಗೂ ಅಧಿವಾಸ ಹೋಮಗಳು ನೆರವೇರಲಿವೆ.

ಎ. 1ರಂದು ಬೆಳಿಗ್ಗೆ 6ಕ್ಕೆ ಗಣಹೋಮ, ಕಲಶ ಪ್ರತಿಷ್ಠೆ, ಪ್ರಧಾನ ಹೋಮ ಹಾಗೂ ದೈವಗಳಿಗೆ ಪುನರ್ ಕಲಶಾಭಿಷೇಕ ನಡೆಯಲಿದೆ. ನಾಗದೇವರಿಗೆ ತಂಬಿಲ ಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7ರಿಂದ 8.30ರವರೆಗೆ ಭಜನಾ ಸಂಕೀರ್ತನೆ ಜರುಗಲಿದೆ. ರಾತ್ರಿ 10ಕ್ಕೆ ಶ್ರೀ ಅರಸು ದೈವದ ನೇಮೋತ್ಸವ ನಡೆಯಲಿದೆ.
ಎ. 2ರಂದು ಸಂಜೆ 7ರಿಂದ 8.30ರವರೆಗೆ ಭಜನಾ ಸಂಕೀರ್ತನೆ ಹಾಗೂ ರಾತ್ರಿ 9ಕ್ಕೆ ಶ್ರೀ ಜುಮಾದಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
ಎ. 3ರಂದು ಸಂಜೆ 6ರಿಂದ 7.30ರವರೆಗೆ ಭಜನಾ ಸಂಕೀರ್ತನೆ ನಡೆಯಲಿದ್ದು, ರಾತ್ರಿ 10ಕ್ಕೆ ಶ್ರೀ ವೈದ್ಯನಾಥ ದೈವದ ನೇಮೋತ್ಸವ, ಕಂಚಿಲ ಸೇವೆ ಹಾಗೂ ಪೇಟೆ ಸವಾರಿ ಬಂಡಿ ಉತ್ಸವ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply