ನೆತ್ತರಕೆರೆ: ಶ್ರೀರಾಮ ನಾಮ ತಾರಕ ಜಪ ಯಜ್ಞ ಸಂಪನ್ನ
ಏಳು ಗ್ರಾಮಗಳ ಭಕ್ತರಿಂದ ಶ್ರೀರಾಮ ನಾಮ ತಾರಕ ಮಂತ್ರ, ಭಕ್ತಿ ಭಾವದಲ್ಲಿ ಮಿಂದೆದ್ದ ರಾಮಭಕ್ತರು
ಬಂಟ್ವಾಳ, ಡಿ. 21: ಕಳ್ಳಿಗೆಯ ನೆತ್ತರಕೆರೆ ಶ್ರೀರಾಮ ನಾಮ ತಾರಕ ಜಪ ಯಜ್ಞ ಸಮಿತಿ ವತಿಯಿಂದ ಶ್ರೀರಾಮ ನಾಮ ತಾರಕ ಜಪ ಯಜ್ಞವು ರವಿವಾರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರ ನೇತೃತ್ವದಲ್ಲಿ ನೆತ್ತರಕೆರೆಯಲ್ಲಿ ನಡೆಯಿತು. 48 ದಿನಗಳ ಕಾಲ ಶ್ರೀರಾಮ ನಾಮ ತಾರಕ ಮಂತ್ರ ಜಪಿಸಿದ ತುಂಬೆ, ಕಳ್ಳಿಗೆ, ಪುದು, ಕೊಡ್ಡಾಣ್, ಮೇರಮಜಲು, ಅರ್ಕುಳ ಹಾಗೂ ಅಮ್ಮುಂಜೆ ಗ್ರಾಮಗಳ ಭಕ್ತರು ಕುಟುಂಬ ಸಮೇತರಾಗಿ 10 ಯಾಗ ಕುಂಡಗಳಲ್ಲಿ ತಾವೇ ಹವಿಸ್ಸು ಸಮರ್ಪಿಸಿದರು.


ಡಿ. 20ರಂದು ಸಂಜೆ 7ಕ್ಕೆ ಪಂಚಗವ್ಯಾದಿ ಮಂಟಪ ಶುದ್ಧಿ, ಅರಣಿ ಮಥನ, ಅಗ್ನಿ ಜನನ ನಡೆಯಿತು. ರವಿವಾರ ಮುಂಜಾನೆ’ ಗಣಪತಿ ಹೋಮ ನಡೆದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಧ್ವಜಾರೋಹಣ ಹಾಗೂ ಗೋಪೂಜೆ ನೆರವೇರಿಸಿದರು. ಬಳಿಕ ಯಜ್ಞಾರಂಭಗೊಂಡು ಪೂರ್ಣಾಹುತಿಯ ಪರ್ಯಾವರಣ ಹಾಗೂ ನಾಗರಿಕ ಬಳಿಕ ಮಹಾ ಮಂಗಳಾರತಿ ನಡೆಯಿತು.
ಸುಧರ್ಮ ಸಭೆಯಲ್ಲಿ ಅಖಿಲ ಭಾರತ ಗ್ರಾಮವಿಕಾಸ ಟೋಳಿ ಸದಸ್ಯ ರಮೇಶ್ ಹೊಸು ಅವರು ದಿಕ್ಕೂಚಿ ಭಾಷಣ ಮಾಡಿ, ಹಿಂದೂ ಸಮಾಜ ಉಳಿದರೆ ಮಾತ್ರ ಜಗತ್ತು ಉಳಿಯಲಿದ್ದು, ಈ ನಿಟ್ಟಿನಲ್ಲಿ ಸಮಾಜದ ಸಂಘಟನೆ, ಜಾಗೃತಿ ಅತಿ ಅಗತ್ಯವಾಗಿದೆ. ಅದಕ್ಕಾಗಿ ನಾವು ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಮಾಜ ಜಾಗೃತಿ ಕಾರ್ಯ ಮಾಡಬೇಕು. ದೇಶದಲ್ಲಿ ಹಿಂದುತ್ವದ ವಾತಾವರಣ ನಿರ್ಮಿಸಿದ ಕೀರ್ತಿ ಹೊತ್ತಿರುವ ಆರ್‌ಎಸ್‌ಎಸ್‌ಗೆ ಪ್ರಸ್ತುತ ಶತಮಾನದ ವರ್ಷವಾಗಿದ್ದು, ಈ ನಿಟ್ಟಿನಲ್ಲಿ ಕುಟುಂಬ, ಸ್ವದೇಶಿ, ಸಾಮರಸ್ಯ, ಶಿಷ್ಟಾಚಾರ ಪಂಚ ಪರಿವರ್ತನೆಯ ಕಾರ್ಯವನ್ನು ನಡೆಸುತ್ತಿದೆ ಎಂದರು.
ಯಜ್ಞ ಸಮಿತಿ ಅಧ್ಯಕ್ಷ ಕೆ.ಆರ್. ದೇವದಾಸ ಕೊಡ್ಡಾಣ್ ಅಧ್ಯಕ್ಷತೆ ಬಾಲಕೃಷ್ಣ ವಹಿಸಿದ್ದರು. ಆರ್‌ಎಸ್ಎಸ್ ಬಂಟ್ವಾಳ ಸಂಘಚಾಲಕ ಆಗ್ರಬೈಲು, ಸಮಿತಿ ಪ್ರಧಾನ ಕಾವ್ಯದರ್ಶಿ ಬಿನುತ್ ಕುಮಾರ್ ಅಬ್ಬೆಟ್ಟು ಕೋಶಾಧಿಕಾರಿ ಕಿಶೋರ್ ಕುಮಾರ್ ದೇಮುಂಡೆ ಮತ್ತಿತರರಿದ್ದರು. ಸಮಿತಿ ಸಂಯೋಜಕರಾದ ದಾಮೋದರ ನೆತ್ತರಕೆರೆ ಸ್ವಾಗತಿಸಿದರು. ತೇವು ತಾರಾನಾಥ ಕೊಟ್ಟಾರಿ ವಂದಿಸಿದರು. ಮನಿಷಾ ಹಾಗೂ ಲತಾ ಕಾರ್ಯಕ್ರಮವನ್ನ ನಿರೂಪಿಸಿದರು

Discover more from BHAKTHI SANJEEVINI
Subscribe to get the latest posts sent to your email.



Leave a Reply