🔥 Follow our WhatsApp Channel! ×
WhatsApp
Loading Now

ಇಂದಿನಿಂದ ಶಿರಡಿ ಸಾಯಿಬಾಬಾ ಮಂದಿರದಲ್ಲಿ61ನೇ ರಾಮನವಮಿ ಉತ್ಸವ

ಇಂದಿನಿಂದ ಶಿರಡಿ ಸಾಯಿಬಾಬಾ ಮಂದಿರದಲ್ಲಿ61ನೇ ರಾಮನವಮಿ ಉತ್ಸವ
ಉರ್ವ ಚಿಲಿಂಬಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಾ. 26 ಮತ್ತು 27ರಂದು 61ನೇ ಶ್ರೀ ರಾಮನವಮಿ ಉತ್ಸವ ಹಾಗೂ ಪೂರ್ವಭಾವಿ ವೈದಿಕ ಕಾರ್ಯಕ್ರಮ ನಡೆಯಲಿದೆ.

ಮಾ.26 ರಂದು ಬೆಳಗ್ಗೆ 6.05 ರಿಂದ ಕಾಕಡ ಆರತಿ, ಪಂಚಗವ್ಯ ಶುದ್ದಿ, ಗಣಹೋಮ ಪ್ರಾರಂಭ. ಪೂರ್ಣಾಹುತಿ, ಧ್ವಜಾರೋಹಣ, ಅಷ್ಟೋತ್ತರ ಸಹಿತ ಮಂಗಳಾರತಿ, ನವಕ ಕಲಶಾಭಿಷೇಕ, ಶ್ರೀ ಗುರುಪಾದ ಪೂಜೆ, (ಪಂಚಾಮೃತ ಸಹಿತ ಏಕಾದಶ ಮಧುರ ದ್ರವ್ಯಗಳಿಂದ ಅಮೃತಾಭಿಷೇಕ) ವಿಷ್ಣು ಸಹಸ್ರನಾಮ, ದೀಪಾರಾಧನೆ, ವಿವಿಧ ತಂಡಗಳಿಂದ ಭಜನ ಕಾರ್ಯಕ್ರಮಗಳು ಮಧ್ಯಾಹ್ನ 12ಕ್ಕೆ ರಂಗಪೂಜೆ ಸಹಿತ. ಮಹಾಮಂಗಳಾರತಿ ಹಾಗೂ

ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ಧೂಪಾರತಿ, ಅಷ್ಟಾವದಾನ ಸೇವೆ, ಮಹಾಪೂಜೆ ಜರುಗಲಿದೆ.

ಮಾ.27-ರಂದು ಬೆಳಗ್ಗೆ 6 ರಿಂದ ಕಾಕಡ ಆರತಿ, ವಿಷ್ಣು ಸಹಸ್ರನಾಮ, ಸಾಮೂಹಿಕ ಮಹಾಮೃತ್ಯುಂಜಯಯಾಗ ಹಾಗೂ ಸಾಮೂಹಿಕ ಗುರುಪಾದ ಪೂಜೆ ಮಧ್ಯಾಹ್ನ 12ಕ್ಕೆ ರಂಗಪೂಜೆ ಸಹಿತ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ, ವಿವಿಧ ತಂಡಗಳಿಂದ ಭಜನ ಕಾರ್ಯಕ್ರಮಗಳು ಸಂಜೆ 5ಕ್ಕೆ ಶ್ರೀ ದೇವಿ ಮಹಾತ್ಮ ಪಾರಾಯಣ, 6ಕ್ಕೆ ಧೂಪಾರತಿ, 7ಕ್ಕೆ ಪಲ್ಲಕ್ಕಿ ಉತ್ಸವ ಶ್ರೀ ಸಾಯಿಬಾಬಾರವರ ನಗರ ಪ್ರದಕ್ಷಿಣೆ, ಮಹಾಪೂಜೆ, ಶೇಜಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮೊತ್ತೇಸರ ವಿಶ್ವಾಸ್ ಕುಮಾರ್ ದಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

Discover more from BHAKTHI SANJEEVINI

Subscribe now to keep reading and get access to the full archive.

Continue reading