ಶಕ್ತಿನಗರ ರಮಾಶಕ್ತಿ ಮಿಷನ್: ಶ್ರೀ ಸಹಸ್ರ ಚಂಡಿಕಾಯಾಗ ಸಂಪನ್ನ
ಶಕ್ತಿನಗರ, ಡಿ.29: ಶಕ್ತಿನಗರದ ರಮಾಶಕ್ತಿ
ಮಿಷನ್‌ನಲ್ಲಿ ಲೋಕಕಲ್ಯಾಣಾರ್ಥವಾಗಿ ಹಮ್ಮಿ ಕೊಳ್ಳಲಾದ ಶ್ರೀ ಸಹಸ್ರ ಚಂಡಿಕಾಯಾಗ ಸೋಮವಾರ ಸಹಸ್ರಾರು ಭಕ್ತರು ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ಗೋಪೂಜೆ, ಗುರುಪ್ರಾರ್ಥನೆ, ಅಗ್ನಿ ವಿಹರಣ, ಹತ್ತು ಕುಂಡಗಳಲ್ಲಿ 100 ಜನ ಋತ್ವಿಜರಿಂದ ಸಹಸ್ರ ಚಂಡಿಕಾ ಯಾಗ ಆರಂಭಗೊಂಡಿತು. ಶೃಂಗೇರಿ ಶಾರದಾ ಪೀಠಾಧಿಪತಿ ಶ್ರೀಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಶಕ್ತಿನಗರ ಮುಖ್ಯರಸ್ತೆಯಿಂದ ಯಾಗ ಶಾಲೆಯವರೆಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಅನಂತರ ಯಾಗದ ಪೂರ್ಣಾಹುತಿ ಜರಗಿತು. ಬಳಿಕ ಶ್ರೀಗಳು ಆಶೀರ್ವಚನ ನೀಡಿದರು. ಆನಂತರ ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು.


Discover more from BHAKTHI SANJEEVINI
Subscribe to get the latest posts sent to your email.



Leave a Reply