🔥 Follow our WhatsApp Channel! ×
WhatsApp
Loading Now

ಮಂಗಳೂರು ಕೆ.ಎಸ್‌.ಆರ್‌.ಟಿಸಿ ಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್…!

ನವರಾತ್ರಿ ಹಾಗೂ ಮಂಗಳೂರು ದಸರಾ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಮಂಗಳೂರು ವಿಭಾಗವು ವಿಶೇಷ ‘ದಸರಾ ಪ್ಯಾಕೇಜ್ ಟೂರ್’ ಪ್ರಕಟಿಸಿದೆ.

2022ರಿಂದ ಯಶಸ್ವಿಯಾಗಿ ನಡೆಯುತ್ತಿರುವ ಈ ಯೋಜನೆಯನ್ನು ಈ ಬಾರಿ ಇನ್ನಷ್ಟು ವಿಸ್ತರಿಸಲಾಗಿದ್ದು, ಶೃಂಗೇರಿ ಸೇರಿದಂತೆ ಒಟ್ಟು 5 ಪ್ರಮುಖ ಮಾರ್ಗಗಳಲ್ಲಿ ಅಕ್ಟೋಬರ್ ​11ರಿಂದ ​ 20ರವರೆಗೆ ಏಕಕಾಲಕ್ಕೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಜನರ ಸೇವೆಗೆ ಆದ್ಯತೆ: 2022ರಲ್ಲಿ ಕೇವಲ ಮಂಗಳೂರಿನ ಒಂಬತ್ತು ದೇವಸ್ಥಾನಗಳ ದರ್ಶನಕ್ಕೆ ಒಂದು ಪ್ಯಾಕೇಜ್ ಆರಂಭಿಸಲಾಗಿತ್ತು. ಪ್ರಯಾಣಿಕರ ಅದ್ಭುತ ಸ್ಪಂದನೆಯಿಂದಾಗಿ ಈಗ ಪ್ಯಾಕೇಜ್‌ಗಳ ಸಂಖ್ಯೆಯನ್ನು ಏರಿಸಲಾಗಿದೆ. ಈ ಬಾರಿ ಸಾರ್ವಜನಿಕರ ಬೇಡಿಕೆಯಂತೆ ಶೃಂಗೇರಿ ಪ್ಯಾಕೇಜ್ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಇದು ಯಾವುದೇ ಲಾಭದ ಉದ್ದೇಶ ಹೊಂದಿಲ್ಲದೇ, ಅತ್ಯಂತ ಕಡಿಮೆ ದರದಲ್ಲಿ ದಸರಾ ಸಂದರ್ಭ ಜನರಿಗೆ ಧಾರ್ಮಿಕ ತಾಣಗಳ ದರ್ಶನ ಕಲ್ಪಿಸುವ ಸೇವಾ ಕಾರ್ಯವಾಗಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

1. ಮಂಗಳೂರು ದಸರಾ ಪ್ಯಾಕೇಜ್ (ನವದುರ್ಗಾ ದರ್ಶನ ಮತ್ತು 9 ದೇವಸ್ಥಾನಗಳು).

2. ಕೊಲ್ಲೂರು ಪ್ಯಾಕೇಜ್.

3. ಶೃಂಗೇರಿ ಪ್ಯಾಕೇಜ್ (ನೂತನ ಸೇರ್ಪಡೆ).

4. ತಲಕಾವೇರಿ – ಭಾಗಮಂಡಲ ಪ್ಯಾಕೇಜ್.

5. ಸಿಗಂದೂರು ಪ್ಯಾಕೇಜ್: ಆನ್‌ಲೈನ್ ಬುಕಿಂಗ್ ಮತ್ತು ಮಾಹಿತಿ ಸಂಪರ್ಕ.

ಪ್ರತಿಯೊಂದು ಪ್ಯಾಕೇಜ್‌‌ಗೂ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮುಂಗಡವಾಗಿ ಆನ್‌ಲೈನ್ ಮೂಲಕ www.ksrtc.in ಜಾಲತಾಣದಲ್ಲಿ ಆಸನಗಳನ್ನು ಕಾಯ್ದಿರಿಸಬಹುದು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading