🔥 Follow our WhatsApp Channel! ×
WhatsApp
Loading Now

ಪಂಚಮುಖಿ ಆಂಜನೇಯ ಹವನದ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಬಿಡುಗಡೆ.

ಶ್ರೀ ವೀರಾಂಜನೇಯ ಕ್ಷೇತ್ರ ನೆಲಪ್ಪಾಲು ಇಲ್ಲಿ ನವೆಂಬರ್ 26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಬಿಡುಗಡೆ ಸಮಾರಂಭವು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಮುಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಮಂಗಳೂರು ವಿಭಾಗದ ಸಹಸಂಯೋಜಕರಾದ ಪುನೀತ್ ಅತ್ತಾವರ ಅವರು ಕಾರ್ಯಕ್ರಮದ ಸ್ವರೂಪ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯಾಗ ಸಮಿತಿಯ ಸಹಸಂಚಾಲಕರಾದ ಶ್ರೀಧರ ತೆಂಕಿಲ, ಪಂಚಮುಖಿ ಆಂಜನೇಯ ಹವನದ ಪ್ರಚಾರ ಹಾಗೂ ಮಾಧ್ಯಮ ಸಮಿತಿಯ ಸಹಸಂಚಾಲಕರಾದ ನಾಗೇಶ್ ಟಿ.ಎಸ್.ಕೆಮ್ಮಾಯಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ದಯಾನಂದ ಗೌಡ ಕೆಮ್ಮಾಯಿ, ಚಂದ್ರಶೇಖರ ಮುಡಾಯೂರು, ತಿಮ್ಮಪ್ಪ ಪೂಜಾರಿ ಮುಡಾಯೂರು, ಶ್ರೀ ವಿಷ್ಣು ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಸಹೊಕ್ಲು, ಬಿಜೆಪಿ ಬೂತ್ ಅಧ್ಯಕ್ಷ ರಾಜೇಶ್ ಹೊಸವೊಕ್ಲು, ಪ್ರಮುಖರಾದ ಹರೀಶ್ ಬೀರ್ನಹಿತ್ಲು , ಹಿರಿಯ ಕಾರ್ಯಕರ್ತರಾದ ತಿಮ್ಮಪ್ಪ ಗೌಡ ಬೋವದಕಾಡು, ಪ್ರಕಾಶ್ ಹೊಸಹೊಕ್ಲು, ಶ್ರೀ ವಿಷ್ಣು ಯುವಕ ಮಂಡಲದ ಮಾಜಿ ಅಧ್ಯಕ್ಷ ಯೋಗೀಶ್ ಕೆಮ್ಮಾಯಿ, ನಮನ್ ಕೆಮ್ಮಾಯಿ ಸೇರಿದಂತೆ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನವೆಂಬರ್ 26ರಂದು ಹೊರೆಕಾಣಿಕೆ ಮೆರವಣಿಗೆ ನವೆಂಬರ್ 26ರಂದು ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ವಿಶೇಷವಾಗಿ ದೇವಸ್ಥಾನದ ಮಹಾವಿಷ್ಣುಮೂರ್ತಿ ದೇವರ ತೀರ್ಥಬಾವಿಯಿಂದ ಕಲಶ ತೀರ್ಥವೂ ಮೆರವಣಿಗೆಯಲ್ಲಿ ಸಾಗಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಸ್ತ ಗ್ರಾಮಸ್ಥರು ಭಕ್ತಿಪೂರ್ವಕವಾಗಿ ಹೊರೆಕಾಣಿಕೆ ಸಮರ್ಪಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಕೃಪೆಗೆ ಹಾಗೂ ಪ್ರಭು ಶ್ರೀರಾಮಚಂದ್ರನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಿತಿಯ ವತಿಯಿಂದ ವಿನಮ್ರವಾಗಿ ವಿನಂತಿಸಲಾಗಿದೆ.

ಜೈ ಶ್ರೀರಾಮ್ 🚩
ಜೈ ಹನುಮಾನ್ 🚩


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading