🔥 Follow our WhatsApp Channel! ×
WhatsApp
Loading Now

ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾನಮಸ್ಕಾರ ಪೂಜೆ.

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೀಗ ಶರನ್ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ದೇವಿ ಆರಾಧನೆ ಕರಾವಳಿಯ ಪ್ರತಿ ದೇವಿ ದೇವಾಲಯಗಳಲ್ಲಿ ಭಕ್ತಿಶ್ರದ್ಧೆಯಿಂದ ನಡೆಯುತ್ತಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು, ಹೂಗಳಿಂದ ಅಲಂಕೃತಗೊಂಡಿರುವ ಕ್ಷೇತ್ರಗಳಲ್ಲಿ ಸಂಭ್ರಮ ಕಂಡು ಬರುತ್ತಿದೆ.

ಮಂಗಳೂರಿನ ಮಾರ್ನಮಿಕಟ್ಟೆ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಕ್ಷೇತ್ರದಲ್ಲಿಯೂ ನವರಾತ್ರಿ ಸಂಭ್ರಮ ಕಂಡು ಬಂತು. ಅಕ್ಟೋಬರ್‌ 13ರ ಮಂಗಳವಾರದಂದು ಜ್ಯೋತಿಷ್ಯ ವಿದ್ವಾನ್‌ ದೈವಜ್ಞ ಕರಣ್ ಜ್ಯೋತಿಷಿಯವರ ಮನೆದೇವರಾದ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಅನುಗ್ರಹದೊಂದಿಗೆ ಅವರ ನಿವಾಸದಲ್ಲಿ ಸಂಜೆ ಸಾರ್ವಜನಿಕ ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾ ನಮಸ್ಕಾರ ಪೂಜೆಯ ವೈಭವದಿಂದ ಭಜನಾ ಸೇವೆಗಳೊಂದಿಗೆ ಜರುಗಿತು. ವಿಶ್ವ ಹಿಂದೂ ಪರಿಷತ್‌ ಮಂಗಳೂರು ಘಟಕದ ಸದಸ್ಯರು ಭಜನಾ ಸೇವೆ ನೀಡಿದರು. ದೇವಿಗೆ ವಿಶೇಷವಾದ ನೃತ್ಯಸೇವೆಯನ್ನೂ ಕಲಾವಿದರು ನೀಡಿದರು. ಶರನ್ನವರಾತ್ರಿ ಉತ್ಸವದ ಕುರಿತಾಗಿ ಜ್ಯೋತಿಷ್ಯ ವಿದ್ವಾನ್‌ ದೈವಜ್ಞ ಕರಣ್‌ ಜ್ಯೋತಿಷಿ ಮಾಹಿತಿ ನೀಡಿದರು.

ಶಾಸಕ ವೇದವ್ಯಾಸ ಕಾಮತ್, ಎಸ್‌ಸಿಡಿಸಿಸಿ ಬ್ಯಾಂಕಿನ ಸಿಇಒ ಗೋಪಾಲಕೃಷ್ಣ ಭಟ್‌, ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್‌, ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಉಜಿರೆ, ವಾಗ್ಮಿ ಅರುಣ್‌ ಉಳ್ಳಾಲ್‌, ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ನಂದನ್ ಮಲ್ಯ, ಪಾಲಿಕೆ ಮಾಜಿ ಸದಸ್ಯ ಶೈಲೇಶ್‌ ಶೆಟ್ಟಿ, ವಕೀಲ ಚಿದಾನಂದ ಕೆದಿಲಾಯ, ಡಾ ಕಾರ್ತಿಕ್‌ ಕೆ ಎಸ್‌, ಡಾ ಅರವಿಂದ ಎಂ, ಡಾ ಅಕ್ಷತಾ ಆಚಾರ್ಯ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು. ಮಹಾ ಅನ್ನಸಂತರ್ಪಣೆ ನಡೆಯಿತು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading