ಕಲ್ಕೂರ ಪ್ರತಿಷ್ಠಾನ ವತಿಯಿಂದ ಸೆ.4ರಂದು ಮಕ್ಕಳ ಉತ್ಸವ ಶ್ರೀ ಕೃಷ್ಣ ವರ್ಣ ವೈಭವ: ಚಿತ್ರಕಲಾ ಸ್ಪರ್ಧೆ.
ಮಂಗಳೂರು : ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯ ಅಂಗವಾಗಿ ಸೆ.4ರಂದು ಕಲ್ಕೂರ ಪ್ರತಿಷ್ಠಾನವು ಶ್ರೀ ಕೃಷ್ಣವರ್ಣ ವೈಭವ ಚಿತ್ರ ಕಲಾ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಅದೇ ದಿನ ಬೆಳಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಎಲ್.ಕೆ.ಜಿ. ಯಿಂದ 2ನೇ ತರಗತಿಯ ಮಕ್ಕಳ (ಪುಟಾಣಿ ವಿಭಾಗ) ಪ್ರತಿಷ್ಠಾನದಿಂದ ನೀಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ಸ್ಕೆಚ್ ಪೆನ್‌ನಿಂದ ಬಣ್ಣ ತುಂಬಿಸುವುದು.
3 ಹಾಗೂ 4ನೇ ತರಗತಿಯ ಮಕ್ಕಳ (ಶಿಶು ವಿಭಾಗ) ಪ್ರತಿಷ್ಠಾನದಿಂದ ನೀಡುವ ಶ್ರೀ ಕೃಷ್ಣನ ಚಿತ್ರಕ್ಕೆ ಕ್ರೇಯಾನ್ಸ್/ಕಲರ್‌ಪೆನ್ಸಿಲ್/ವಾಟರ್‌ಕಲರ್‌ನಿಂದ ಬಣ್ಣ ತುಂಬಿಸುವುದು. 5 ರಿಂದ 7ನೇ ತರಗತಿಯ ವಿದ್ಯಾರ್ಥಿಗಳ (ಬಾಲ ವಿಭಾಗ) ಪ್ರತಿಷ್ಠಾನದಿಂದ ನೀಡುವ ಶ್ರೀ ಕೃಷ್ಣನ ಚಿತ್ರಕ್ಕೆ ವಾಟರ್‌ಕರ್ಲ/ ಕಲರ್ ಪೆನ್ಸಿಲ್‌ನಿಂದ ಬಣ್ಣ ತುಂಬಿಸುವುದು.
8 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ (ಕಿಶೋರವಿಭಾಗ) ವಾಟರ್ ಕರ್ಲ/ಅಕ್ರಿಲಿಕ್ ಕಲರ್‌ಮೂಲಕ ಸುಧಾಮ ಕೃಷ್ಣನ ಚಿತ್ರ ರಚಿಸುವುದು. ಪಿಯುಸಿ ಮತ್ತು ಮೇಲ್ಪಟ್ಟು (ಸಾರ್ವಜನಿಕರಿಗೆ ಮುಕ್ತ) ವಿಶ್ವರೂಪ ದರ್ಶನ ಅಥವಾ ಗೋಪಾಲಕೃಷ್ಣ ಚಿತ್ರವನ್ನು ವಾಟರ್ ಕರ್ಲ/ಅಕ್ರಿಲಿಕ್ ಕಲರ್‌ನಲ್ಲಿ ರಚಿಸುವ ಸ್ಪರ್ಧೆಯನ್ನು ನಡೆಸಲಾಗುವುದು.
ಸ್ಥಳದಲ್ಲೇ ಹೆಸರು ನೊಂದಾಯಿಸಬಹುದು. ಸ್ಪರ್ದಾಳುಗಳಿಗೆ ಡ್ರಾಯಿಂಗ್ ಶೀಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ಸಂಚಾಲಕ ಜಾನ್ ಚಂದ್ರನ್ ಅವರನ್ನು ಸಂಪರ್ಕಿಸಬಹುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply