🔥 Follow our WhatsApp Channel! ×
WhatsApp
Loading Now

ಶ್ರೀ ರಮಾದೇವಿಯವರ ಮಹಾಸಮಾಧಿ ದಿನಾಚರಣೆ – ಭಕ್ತರಿಗೆ ವಿಶೇಷ ಆಹ್ವಾನ..!

ಮಂಗಳೂರು: ದಿವ್ಯ ಮಾತೆಯವರಾದ ಶ್ರೀ ರಮಾದೇವಿಯವರ ಮಹಾಸಮಾಧಿ ದಿನದ ಅಂಗವಾಗಿ ನವೆಂಬರ್ 1, 2026ರಂದು ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪುಣ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಎಲ್ಲಾ ಭಕ್ತಾದಿಗಳಿಗೆ ಭಕ್ತಿಪೂರ್ವಕ ಆಹ್ವಾನ ನೀಡಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8:30ರಿಂದ 10:30ರವರೆಗೆ ಮಿಷನ್ ಆಸ್ಪತ್ರೆಯ ಆವರಣದಲ್ಲಿ ದಿವ್ಯ ಮಾತೆಯವರ ಪ್ರಸಾದ ರೂಪವಾಗಿ ಅಕ್ಕಿ ವಿತರಣೆ ನಡೆಯಲಿದೆ.

ಇನ್ನು ರಾತ್ರಿ 7:30ರಿಂದ ಭಗವಾನ್ ಸ್ಮಾರಕ ಸಭಾಂಗಣದಲ್ಲಿ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ ಜರುಗಲಿದೆ.

ದಿವ್ಯ ಮಾತೆಯವರ ಸ್ಮರಣಾರ್ಥ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ, ಭಕ್ತಿಭಾವದಿಂದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದಿವ್ಯ ಮಾತೆಯವರ ಆಶೀರ್ವಾದ ಹಾಗೂ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಯೋಜಕರು ವಿನಂತಿಸಿದ್ದಾರೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading