ಮಂಗಳೂರಿನಲ್ಲಿ ತಿರುಪತಿ ತಿಮ್ಮಪ್ಪ- ಕರಾವಳಿಯಲ್ಲೇ ಇನ್ಮುಂದೆ ಶ್ರೀವಾರಿ ದರ್ಶನ.
ಮಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಗೆ ಇದೇ ಮೊದಲ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಸ್ಥಾಪನೆಗೊಳ್ಳಲಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಬಡಗ ಎಕ್ಕಾರು ಬೆಟ್ಟು ಪ್ರದೇಶದಲ್ಲಿ ಈ ನೂತನ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಇನ್ನೊಂದು ವರ್ಷದಲ್ಲಿ ಭವ್ಯವಾಗಿ ತಲೆ ಎತ್ತಲಿದೆ.
ಎರಡನೇ ತಿರುಪತಿ ದೇವಸ್ಥಾನ ರಾಜ್ಯದಲ್ಲಿ ಇದುವರೆಗೆ ಬೆಂಗಳೂರಿನಲ್ಲಿ ಮಾತ್ರ ತಿರುಪತಿ ದೇವಸ್ಥಾನವಿತ್ತು. ಅದನ್ನು ಹೊರತುಪಡಿಸಿದರೆ, ಕರಾವಳಿ ಭಾಗದ ಮಂಗಳೂರಿನಲ್ಲಿ ಟಿಟಿಡಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಎರಡನೇ ತಿರುಪತಿ ದೇವಸ್ಥಾನ ಇದಾಗಿದೆ. ಈ ಮಹತ್ಕಾರ್ಯಕ್ಕಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ದೇವಸ್ಥಾನ ನಿರ್ಮಾಣಕ್ಕೆ ಮಂಗಳೂರಿನಲ್ಲಿ ಒಟ್ಟು 10 ಎಕರೆ ಜಮೀನನ್ನು ಅಧಿಕೃತವಾಗಿ ಮಂಜೂರು ಮಾಡಲಾಗಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply