🔥 Follow our WhatsApp Channel! ×
WhatsApp
Loading Now

ತೊಕ್ಕೊಟ್ಟು ಚೆಂಬುಗುಡ್ಡೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ: ಕಾರ್ತಿಕ ದೀಪೋತ್ಸವ

ಉಳ್ಳಾಲ: ಭಾರತೀಯರಲ್ಲಿ ಪ್ರಕೃತಿಯ ಬಗ್ಗೆ ಕೃತಜ್ಞತಾ ಭಾವನೆ ಮತ್ತಷ್ಟು ಬೆಳೆಯ ಬೇಕಿದೆ. ಪ್ರಕೃತಿಯು ನಮಗೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗೌರವಿಸುವ ಹಾಗೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕೆಂದು ರಾಷ್ಟ್ರಸೇವಿಕಾ ಸಮಿತಿ ದಕ್ಷಿಣ ಪ್ರಾಂತದ ಸಹ ಬೌದ್ದಿಕ್ ಪ್ರಮುಖ ರಾದ ಮೀನಾಕ್ಷಿ ಮಾತಾಜಿ ಹೇಳಿದ್ದಾರೆ.

ಚೆಂಬುಗುಡ್ಡೆಯ ಮಂಗಳೂರು ರಾಷ್ಟೋತ್ಥಾನ ವಿದ್ಯಾಕೇಂದ್ರ ದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ನಡೆದ ಕಾರ್ತಿಕ ದೀಪೋತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ತೊಕ್ಕೊಟ್ಟು ಗೋ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ಅಖಂಡ ಭಾರತಕ್ಕೆ ದೀಪಪ್ರಜ್ವಲನೆ ನೆರವೇರಿಸಲಾಯಿತು.

ಈ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟೋತ್ಥಾನ ವಿದ್ಯಾಕೇಂದ್ರದ ಮಾತೃಭಾರತಿಯ ಸದಸ್ಯರಿಂದ ನೃತ್ಯರೂಪಕ ಪ್ರದರ್ಶನ ಗೊಂಡಿತು. ವಿದ್ಯಾರ್ಥಿನಿಯರಿಂದ ಕುಣಿತ ಭಜನೆ ಹಾಗೂ ವಿದ್ಯಾಕೇಂದ್ರದ ಮಾತಾಜಿಯವರಿಂದ ನೃತ್ಯರೂಪಕ ಪ್ರದರ್ಶನ ನಡೆಯಿತು. ಬಳಿಕ ನಡೆದ ತುಳಸಿ ಪೂಜೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ಮಂಗಳೂರು ರಾಷ್ಟೋತ್ಥಾನ ವಿದ್ಯಾ ಕೇಂದ್ರದ ಪ್ರಧಾನಾಚಾರ್ಯರಾದ ವಿದ್ಯಾ ಕಾಮತ್, ಸಂಸ್ಥೆಕಾರ್ಯ ನಿರ್ವಹಣಾಧಿ ಕಾರಿ ಪ್ರಖ್ಯಾತ್ ರೈ ಉಪಸ್ಥಿತರಿದ್ದರು.

ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ಲಾವಣ್ಯ ಜಯರಾಜ್ ಸ್ವಾಗತಿಸಿ, ಕನ್ನಡ ವಿಭಾಗದ ಕಾವ್ಯ ನಿರೂಪಿಸಿ, ಹಿಂದಿ ವಿಭಾಗ ಮುಖ್ಯಸ್ಥರು ಪ್ರಮೀಳಾ ವಂದಿಸಿದರು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed


error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading