🔥 Follow our WhatsApp Channel! ×
WhatsApp
Loading Now

ನಾಗಬನಗಳು ಪ್ರಕೃತ್ತಿದತ್ತವಾಗಿರಲಿ…ಕಾಂಕ್ರೀಟ್ ಕಾಡುಗಳನ್ನು ದೂರವಿರೋಣ…!

ನಾಗಬನ ಎಂದರೆ ನಾಗದೇವನಿಗೆ ಮೀಸಲಾದ ಪವಿತ್ರ ಕಾಡು ಅಥವಾ ವೃಕ್ಷಗಳ ತಾಣ. ಇದು ಕೇವಲ ಧಾರ್ಮಿಕ ಆರಾಧನಾ ಸ್ಥಳವಷ್ಟೇ ಅಲ್ಲದೆ, ನೂರಾರು ವಿಧದ ಔಷಧೀಯ ಸಸ್ಯಗಳು ಮತ್ತು ಜೀವವೈವಿಧ್ಯವನ್ನು ರಕ್ಷಿಸುವ ಪ್ರಾಚೀನ ಪರಿಸರ ಸಂರಕ್ಷಣಾ ಕೇಂದ್ರವಾಗಿದೆ.

ನಾಗಬನ ಮತ್ತು ಪ್ರಕೃತಿ ಸಂಬಂಧ ಸಸ್ಯ ಸಂಕುಲ: ಸಾಂಪ್ರದಾಯಿಕ ನಾಗಬನಗಳಲ್ಲಿ ೬೦ ರಿಂದ ೭೦ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು ಮತ್ತು ಬಳ್ಳಿಗಳು ಇರುತ್ತವೆ. ವನ್ಯಜೀವಿ ರಕ್ಷಣೆ: ಇಲ್ಲಿ ಮರಗಳನ್ನು ಕಡಿಯದ ಕಾರಣ ಹಕ್ಕಿಗಳು, ಸರೀಸೃಪಗಳು ಹಾಗೂ ಇತರೆ ಸೂಕ್ಷ್ಮ ಜೀವಗಳಿಗೆ ಇದು ಸುರಕ್ಷಿತ ನೆಲೆ. ನಾಗನ ಮರ ಬಳ್ಳಿಗಳನ್ನು ಮುಟ್ಟಿದರೂ ಮನೆಗೆ ನಾಗ ಜತೆಯಲ್ಲೇ ಬರುತ್ತಿದ್ದ ಕಾಲ ಇತ್ತು. ಅದಕ್ಕಾಗಿ ನಾಗ ಬನವನ್ನು ಯಾರು ಕಡಿಯುತ್ತಿರಲಿಲ್ಲ.

ಜಲಮೂಲಗಳ ಸಂರಕ್ಷಣೆ: ದಟ್ಟವಾದ ಮರಗಳ ಬೇರುಗಳು ಭೂಮಿಯ ತೇವಾಂಶ ಕಾಪಾಡುತ್ತವೆ. ಹುತ್ತಗಳು ಇದು ಅಂತರ್ಜಲ ಮಟ್ಟ ಹೆಚ್ಚಲು ಸಹಕಾರಿ. ವಾತಾವರಣ ಶುದ್ಧೀಕರಣ: ಪ್ರಕೃತಿಯ ಮಡಿಲಲ್ಲಿರುವ ಈ ತಾಣಗಳು ಆಮ್ಲಜನಕದ ಮೂಲವಾಗಿ ಮತ್ತು ಹಸಿರು ಹೊದಿಕೆಯಾಗಿ ಪರಿಸರ ಸಮತೋಲನ ಕಾಯ್ದುಕೊಳ್ಳುತ್ತವೆ.

ಪರಿಸರ ಸ್ನೇಹಿಯಾದ ಹಾವುಗಳನ್ನು ಸಂತಾನ ನಶಿಸುತ್ತಿದೆ. ಅದರೆ ಹಾವುಗಳು ಸಂತಾನೋತ್ಪತ್ತಿ ಮಾಡುವುದೇ ಇಂತಹ ತಂಪು ಪ್ರದೇಶದ ಪ್ರಕೃತಿಯ ಮಡಿಲಲ್ಲಿ. ಅದರೆ ಇಂದು ಕಾಂಕ್ರೀಟ್ ಗುಡಿಗಳನ್ನು ಕಟ್ಟಿ ಅದರೊಳಗೆ ಟೈಲ್ಸ್ ಗಳನ್ನು ಹಾಕಿ ಅಲ್ಲಿ ಮರಪೊದೆಗಳನ್ನು ಕಡಿದು ಆ ಕಾಂಕ್ರೀಟ್ ಗುಡಿಗಳಿಗೆ ನೆರಳಿಗೆ ಶೀಟುಗಳನ್ನ ಹಾಕಿರುವ ನಾಗ ಬನಗಳು ಎಲ್ಲೆಡೆ ಕಾಣಿಸುತ್ತವೆ.

ಇನ್ನಾದರೂ ನಾಗಬನ ಉಳಿಸಿ ಬೆಳೆಸಿ ಕಾಡು ಮರ ಬಳ್ಳಿಯ ಮಧ್ಯೆ ನಾಗಬನ ಇರಲಿ ಕಾಂಕ್ರೀಟ್ ಕಾಡಿನ ಮಧ್ಯೆ ಗುಡಿ ಕಟ್ಟಿ ಅದರೊಳಗೆ ನಾಗನ ವಿಗ್ರಹ, ಚಿತ್ರಕೂಟ ರಚಿಸುದಕ್ಕಿಂತ ನೇಚರ್ ನಾಗನ ಬನ ಉಳಿಯಲಿ. ಹೆಚ್ವಿನ ಕಡೆ ಪ್ರಕೃತಿ ದತ್ತ ವಾಗಿ ಅರಿವು ಇದ್ದವರು ಉಳಿಸಿದ್ದಾರೆ. ಈ ಚಿತ್ರ ಪೈವಳಿಕೆಯ ಗ್ರಾಮದ ಕುರ್ಯಗುತ್ತು ಮತ್ತು ಬೈಲುಕುರಿಯದವರ ಸ್ಥಳದಲ್ಲಿ ಕಂಡುಬರುವ ನಾಗನ ಅಲಡೆ. ಚಿತ್ರಕೂಟದ ಮಧ್ಯೆ ಚತುರ್ಮುಖವಾಗಿ ನಾಗೆ ಕನ್ನಿಕೆ, ಯಕ್ಷಿ ದೇವತೆಗಳ ಶಿವಶಕ್ತಿಯ ಒಂದು ಕೂಟ ಅಲಡೆ ಇದಾಗಿದೆ. ನೆಚುರಲ್ ಅಗಿ ಈಗಾಲೂ ಹರಿದು ಜೋಗು ನೀರಿನಾಶ್ರಯವಿರುವ ಜಲಸಂಪನ್ಮೂಲ ಕಣಿಯ ಬದಿಯಲ್ಲೇ ಈ ನಾಗನ ಹಳೆಯ ಕಾಲದ ಚಿತ್ರಕೂಟ ಇಲ್ಲಿದೆ ನೋಡಲು ಬಹಳ ಸುಂದರವಾಗಿದೆ.ಇಂತಹ ನಾಗಬನಗಳು ಮುಂದೇ ಅದರೂ ಮುಂದಿನ ಪೀಳಿಗೆಗೆ ಯಥಾಪ್ರಕಾರ ಉಳಿಯಬೇಕು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading