ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಭಕ್ತಿ-ಶ್ರದ್ಧೆಯ ನಾಗರಪಂಚಮಿ.
ಮಂಗಳೂರಿನ ಪ್ರಸಿದ್ಧ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಆಗಸ್ಟ್ 17 ರಂದು ನಾಗರ ಪಂಚಮಿಯನ್ನು ಅತ್ಯಂತ ಭಕ್ತಿ-ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕರಾವಳಿಯಾದ್ಯಂತ ಪ್ರಮುಖ ನಾಗ ಕ್ಷೇತ್ರವಾಗಿರುವ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ನಾಗ ದೇವರಿಗೆ ಹಾಲೆರೆದು, ವಿಶೇಷ ಪೂಜೆ ಸಲ್ಲಿಸಿದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನ ಅರ್ಚಕರಾದ ನರಸಿಂಹ ತಂತ್ರಿ, “ತುಳುನಾಡಿನಲ್ಲಿ ಪ್ರಥಮವಾಗಿ ಬರುವಂತಹ ವಿಶೇಷ ಹಬ್ಬವೇ ನಾಗರಪಂಚಮಿ. ಕುಡುಪು ಅನಂತಪದ್ಮನಾಭ ಕ್ಷೇತ್ರದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕಗಳು ನಿರಂತರವಾಗಿ ನಡೆಯುತ್ತವೆ. ಇಂದಿನ ದಿನದಲ್ಲಿ ಹತ್ತು-ಹದಿನೈದು ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ಜರುಗುತ್ತವೆ. ಭಕ್ತರು ತಮ್ಮ ತಮ್ಮ ಮೂಲಸ್ಥಾನಗಳಿಗೆ ತೆರಳಿ ಸೇವೆ ಸಲ್ಲಿಸುವುದರ ಜೊತೆಗೆ ಕ್ಷೇತ್ರಕ್ಕೂ ಬಂದು ಆಶ್ಲೇಷಾ ಬಲಿ, ಸರ್ಪ ಸಂಸ್ಕಾರ ಹಾಗೂ ನಾಗಪ್ರತಿಷ್ಠೆ ಮುಂತಾದ ಸೇವೆಗಳನ್ನು ನಡೆಸುತ್ತಾರೆ. ನಾಗದೇವರನ್ನು ಭಕ್ತಿಯಿಂದ ಆರಾಧಿಸಿದರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ” ಎಂದರು.

Discover more from BHAKTHI SANJEEVINI
Subscribe to get the latest posts sent to your email.



Leave a Reply