ಇಸ್ಕಾನ್: ಸೆ. 3, 4ರಂದು ಶ್ರೀಕೃಷ್ಣಜನ್ಮಾಷ್ಟಮಿ – ಶ್ರೀ ಕೃಷ್ಣ ವೇಷ ಸ್ಪರ್ಧೆ.
ಇಸ್ಕಾನ್ ಮಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಸೆ.3 ಮತ್ತು 4ರಂದು ಪಿಲಿಕುಳ ಸ್ಕೌಟ್ಸ್ ‘ಭವನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಈ ಮಹೋತ್ಸವದ ಅಂಗವಾಗಿ ಆ. 29 ಹಾಗೂ ಸೆ. 3, 4 ಮತ್ತು 5ರಂದು ವಿವಿಧ ಭಕ್ತಿಮಯ, ಸಾಂಸ್ಕೃತಿಕ ಹಾಗೂ ಪ್ರತಿಭಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಿ – ಕೆಜಿ, ಯು.ಕೆ.ಜಿ. ಯಿಂದ ಎಲ್.ಕೆ.ಜಿ. ಪದವಿ ವಿದ್ಯಾರ್ಥಿಗಳವರೆಗೆ ವಿಭಾಗಗಳಲ್ಲಿ ನಡೆಯಲಿದೆ.
ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳಷ್ಟೇ ಅಲ್ಲದೆ ಎಲ್ಲ ವಯೋಮಾನದ ಸಾರ್ವಜನಿಕರೂ ಸಹ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಇಸ್ಕಾನ್, ಕಲಾಕುಂಜ ಮಂಗಳೂರು ಕೊಡಿಯಾಲಬೈಲು ಕಚೇರಿಯನ್ನು ಸಂಪರ್ಕಿಸಬಹುದು ಇಸ್ಕಾನ್ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದೆ.


ಆನ್‌ಲೈನ್ ನೋಂದಣಿಗಾಗಿ ದಯವಿಟ್ಟು ಕೆಳಗಿನ ಕೋಡ್ ಅನ್ನು ಸ್ಕ್ಯಾನ್ ಮಾಡಿ.

Discover more from BHAKTHI SANJEEVINI
Subscribe to get the latest posts sent to your email.



Leave a Reply