ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ 2027ರ ಪೂರ್ವಭಾವಿಯಾಗಿ ನವೆಂಬರ್ 1, 2026ರಂದು ಬೆಳಿಗ್ಗೆ 8:35ರ ಶುಭ ಮುಹೂರ್ತದಲ್ಲಿ ಅಟ್ಟಳಿಗೆ ಮುಹೂರ್ತ ನೆರವೇರಿದೆ.
ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಅಟ್ಟಳಿಕೆ ಮುಹೂರ್ತ ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಿತಿ (ರಿ.) ಆಶ್ರಯದಲ್ಲಿ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ, ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಅಟ್ಟಳಿಕೆ ಮುಹೂರ್ತ ಪೂಜೆ ನೆರವೇರಿತು.

ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಪಾದಪೂಜೆ ಸಲ್ಲಿಸಿದ ಬಳಿಕ, ಪೂಜ್ಯ ಪ್ರಸಂಗಸಾಗರ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಹಾಗೂ ಕಾರ್ಕಳ ಶ್ರೀ ಜೈನ ಮಠ ಮತ್ತು ಸೊಂದಾ ಶ್ರೀ ಜೈನ ಮಠದ ಪೂಜ್ಯ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಅಟ್ಟಳಿಕೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಶಾಸಕ ವಿ. ಸುನೀಲ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪಡುಬಿದ್ರೆ ಬೀಡು ರತ್ನಾಕರ ರಾಜ್ಅ ರಸು, ಕಿನ್ಯಾಕ್ಕ ಬಲ್ಲಾಳ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ (ಮಂಗಳೂರು), ಕೋಶಾಧಿಕಾರಿ ಎ. ಮೋಹನ್ ಪಡಿವಾಳ್, ಸುನೀಲ್ ಕುಮಾರ್ ಬಜಗೋಳಿ, ಕೆ. ಪಿ. ಜಗದೀಶ್ ಅಧಿಕಾರಿ, ಮಹಾವೀರ್ ಹೆಗ್ಡೆ, ಭರತ್ ಜೈನ್ ಸಾನೂರು, ಶೀತಲ್ ಜೈನ್, ಮಹಾವೀರ್ ಜೈನ್ ನಲ್ಲೂರು, ಆದಿರಾಜ್ ಅಜ್ರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಶ್ರಾವಕ-ಶ್ರಾವಕಿಯರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
Discover more from BHAKTHI SANJEEVINI
Subscribe to get the latest posts sent to your email.



Leave a Reply