ಶಕ್ತಿನಗರದಲ್ಲಿ ಸೆ. 14 ರಂದು ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವ.
ಮಂಗಳೂರು: ಇಲ್ಲಿನ ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬಳಿ ಇರುವ ಛತ್ರಪತಿ ಶಿವಾಜಿ ವೃತ್ತದಲ್ಲಿ ಸೆಪ್ಟೆಂಬರ್ 14 ರಂದು ಪ್ರಥಮ ವರ್ಷದ ‘ಹಿಂದು ಮಹಾ ಶಕ್ತಿ ಗಣಪತಿ’ ಉತ್ಸವವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ಆಶ್ರಯದಲ್ಲಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಮಾತೃಶಕ್ತಿ–ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆ ಶಕ್ತಿನಗರದ ಸಹಯೋಗದೊಂದಿಗೆ ಈ ಗಣೇಶೋತ್ಸವ ನಡೆಯಲಿದೆ. ಈ ಪ್ರಯುಕ್ತ ದಿನವಿಡೀ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ವಿವರ: ಉತ್ಸವದ ಅಂಗವಾಗಿ ಸೆ. 14ರಂದು ಬೆಳಿಗ್ಗೆಯಿಂದಲೇ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮಗಳು ಜರುಗಲಿವೆ.
ಬೆಳಿಗ್ಗೆ 8:45: ಶ್ರೀ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗಣಹೋಮ.ಬೆಳಿಗ್ಗೆ 10:30: ವಿಎಚ್‌ಪಿ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ಭಜನೆ. ಮಧ್ಯಾಹ್ನ 12:30: ಮಹಾಪೂಜೆ.ಮಧ್ಯಾಹ್ನ 2:00 ರಿಂದ 4:00: ಸ್ಥಳೀಯ ಭಜನಾ ವೃಂದಗಳಿಂದ ಭಜನಾ ಸೇವೆ.ಸಂಜೆ 4:00: ಬಾಲ ಸಂಸ್ಕಾರ ಕೇಂದ್ರದ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ.ಸಂಜೆ 6:00: ಮಹಾಪೂಜೆ.
ಸಂಜೆ 5ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ: ಸಂಜೆ 5 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಲಿದ್ದು, ಕಾರ್ಯಕ್ರಮವನ್ನು ಉದ್ಯಮಿ ಅವಿನಾಶ್ ಅಂಚನ್ ಉದ್ಘಾಟಿಸಲಿದ್ದಾರೆ. ವಿಎಚ್‌ಪಿ ನಾಗೂರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಸ್ತಾವಿಕವಾಗಿ ಮಾತನಾಡಲಿದ್ದು, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಎಚ್‌ಪಿ ಶ್ರೀಕೃಷ್ಣ ಬಾಲಸಂಸ್ಕಾರ ಕೇಂದ್ರದ ಮಾತಾಜಿ ರಮಾದೇವಿ ಹಾಗೂ ವಿಎಚ್‌ಪಿ ಶ್ರೀ ವೈದ್ಯನಾಥ ಶಾಖೆಯ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿರಲಿದ್ದಾರೆ.ಭವ್ಯ ಶೋಭಾಯಾತ್ರೆ ಮತ್ತು ವಿಸರ್ಜನೆ: ಸಂಜೆ 6:30ಕ್ಕೆ ‘ಶ್ರೀ ಹಿಂದೂ ಮಹಾ ಶಕ್ತಿ ಗಣಪತಿ’ಯ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. ಶಿವಾಜಿ ವೃತ್ತದಿಂದ ಪ್ರಾರಂಭವಾಗುವ ಮೆರವಣಿಗೆಯು ಶಕ್ತಿನಗರದ ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಿ, ಬಳಿಕ ಹಿಂತಿರುಗಿ ಪಡೀಲ್ ಬೈರಾಡಿ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ತಂಭನದ (ವಿಸರ್ಜನೆ) ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply