🔥 Follow our WhatsApp Channel! ×
WhatsApp
Loading Now

ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯದ ಪ್ರಯುಕ್ತ ಪಾದುಕಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಬ್ರಹ್ಮಶ್ರೀ ವೇ। ಮೂ। ಉಚ್ಚಿಲತ್ತಾಯ ಪದ್ಮನಾಭತಂತ್ರಿಗಳ ವೈದಿಕ ನೇತೃತ್ವದಲ್ಲಿ ನಡೆಯಿತು.

ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಮಾತನಾಡಿ, ಮುಂದಿನ ಎಂಟು ತಿಂಗಳಲ್ಲಿ ಪುನರ್‌ನಿರ್ಮಾಣದ ಎಲ್ಲ ಕಾರ್ಯಗಳನ್ನು ಪೂರ್ತಿಗೊಳಿಸಿ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲ ಸೇವೆಯನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.

ಈ ಸಂಧರ್ಭದಲ್ಲಿ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಶಿವಾನಂದ ರಾವ್, ಕಾರ್ಯದರ್ಶಿ ಹರಿಪ್ರಸಾದ್ ಜೆ., ಉಪಾಧ್ಯಕ್ಷ ಜೆ.ಕೃಷ್ಣಾನಂದ ರಾವ್, ಕೋಶಾಧಿಕಾರಿ ಸಂತೋಷ್ ರಾವ್. ಟ್ರಸ್ಟಿಗಳಾದ ಕೊರಗಪ್ಪ ಜೆ., ‘ಯೋಗೀಶ್ ಕುಮಾರ್‌ಜಪ್ಪು ಸುಧೀರ್‌ಜೆ., ಜೆ.ನವೀನ್‌ಚಂದ್ರ, ಗುತ್ತಿಗೆದಾರರಾದ ಶಾಂತರಾಮ್, ಶ್ರೀಧರ್‌ಮುರುಡೇಶ್ವರ, ಶ್ಯಾಮ್ ಪ್ರಸಾದ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಜೆ., ಕಾರ್ಯದರ್ಶಿ ಮಲ್ಲಿಕಾ ರಾವ್, ಪ್ರದೀಪ್ ಪಾಲೆಮಾರ್ ಹಾಗೂ ಭಕ್ತರು ಉಪಸ್ಥಿತರಿದ್ದರು.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading