🔥 Follow our WhatsApp Channel! ×
WhatsApp
Loading Now

ಆಗಸ್ಟ್: 16 ರಂದು ಕುದ್ರೋಳಿ ಗೋಕರ್ನಾಥ ಕ್ಷೇತ್ರದಲ್ಲಿ ಕೃಷ್ಣಕಲೋತ್ಸವ 2026

ಮಂಗಳೂರು: ಕುದ್ರೋಳಿ ಗೋಕರ್ನಾಥ ಕ್ಷೇತ್ರ ಇದರ ಆಶ್ರಯದಲ್ಲಿ ಟೀಮ್ ವಿಹಾರಿ ಅರ್ಪಿಸುವ ಕೃಷ್ಣಕಲೋತ್ಸವ 2026 ಕೃಷ್ಣ ವೇಷ ಸ್ಪರ್ಧೆ ಆಗಸ್ಟ್ 16ರಂದು ಶ್ರೀ ಕುದ್ರೋಳಿ ಕ್ಷೇತ್ರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಕಲೋತ್ಸವ 2026 ರ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಗೋಕರ್ನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಕೇಂದ್ರದ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಅವರು ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದಲ್ಲಿ ಕೃಷ್ಣಕಲೋತ್ಸವದ ಆಮಂತ್ರಣ ಪತ್ರಿಕೆಯನ್ನ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕುದೋಳಿ ಗೋಕರ್ನಾಥ ಕ್ಷೇತ್ರದ ಅಧ್ಯಕ್ಷರು ಜಯರಾಮ್ ಎಚ್ ಸೋಮಸುಂದರಂ. ಖಜಾಂಚಿ ಆರ್ ಪದ್ಮರಾಜ್ ಸೇರಿದಂತೆ ಕೃಷ್ಣಕಲೋತ್ಸವ ಸಮಿತಿಯ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.

ಆಗಸ್ಟ್ 16ರಂದು ಶ್ರೀ ಕ್ಷೇತ್ರದ ವಠಾರದಲ್ಲಿ ಕೃಷ್ಣವೇಶ ಸ್ಪರ್ಧೆ ವಿಭಾಗವಾರು ಮಟ್ಟದಲ್ಲಿ ನಡೆಯಲಿದೆ. ವಿಜೇತರು ನಗದು ಬಹುಮಾನವನ್ನು ಪಡೆಯಲಿರುವರು. ಬೆಳಗ್ಗೆ 8:30 ಸರಿಯಾಗಿ ಉದ್ಘಾಟನೆ ನಡೆಯಲಿದ್ದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Discover more from BHAKTHI SANJEEVINI

Subscribe to get the latest posts sent to your email.

Leave a Reply

You May Have Missed

error: Content is protected !!

Discover more from BHAKTHI SANJEEVINI

Subscribe now to keep reading and get access to the full archive.

Continue reading